ಹುಬ್ಬಳ್ಳಿ:ಕಳೆದ ಮೂರು ದಿನಗಳಿಂದ ಚಿರತೆ ಬಂದಿದೆ ಎಂದು ಹೇಳಲಾಗುತ್ತಿತ್ತು. ಇದೀಗ ನಗರದ ರಾಜನಗರದ ಕೇಂದ್ರೀಯ ವಿದ್ಯಾಲಯ ಶಾಲೆಯ ಆವರಣದಲ್ಲಿ ಪ್ರತ್ಯಕ್ಷವಾಗಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಚಿರತೆ ಸೆರೆಗೆ ಬಲೆ ಬೀಸಿದೆ.
ಚಿರತೆ ಸೆರೆಗೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಈ ವಿಷಯ ತಿಳಿಯುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ನೃಪತುಂಗ ಬೆಟ್ಟದ ಸುತ್ತಮುತ್ತ ಕಾರ್ಯಾಚರಣೆ ಕೈಗೊಂಡಿದ್ದರು. ಆದ್ರೆ ಚಿರತೆ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ನಿನ್ನೆ ರಾತ್ರಿ ದಿಢೀರ್ ಪ್ರತ್ಯಕ್ಷವಾಗಿದೆ. ಇದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಚಿರತೆ ಇರೋದು ಪಕ್ಕಾ ಆದ್ಮೇಲೆ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯ ಅಶೋಕ ನಗರದ ಪೊಲೀಸರು ಅಲರ್ಟ್ ಆಗಿದ್ದು, ಚಿರತೆ ಸೆರೆಗೆ 4 ಬೋನ್ಗಳನ್ನು ಇಟ್ಟಿದ್ದಾರೆ. ಇದರ ಜೊತೆಗೆ ನಗರದಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ.
ಚಿರತೆ ಸೆರೆಗೆ ಕಾರ್ಯ ಪ್ರವೃತವಾದ ಅರಣ್ಯ ಇಲಾಖೆ ರಾತ್ರಿಯ ವೇಳೆ ಮಾತ್ರ ಚಿರತೆ ಕಾಣಿಸಿಕೊಳ್ಳುತ್ತಿದೆ. ಅದನ್ನು ಹಿಡಿಯಲು ಅರಣ್ಯ ಇಲಾಖೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಇಲಾಖೆ ಹೆಚ್ಚುವರಿ ಸಿಬ್ಬಂದಿಯನ್ನು ಧಾರವಾಡದಿಂದ ನೇಮಿಸಲಾಗುತ್ತಿದ್ದು, ಶೀಘ್ರದಲ್ಲಿ ಚಿರತೆ ಸೆರೆಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದೆ.
ನೃಪತುಂಗ ಬೆಟ್ಟದಲ್ಲಿ ಮರಗಳ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲಿಯಾದರೂ ಅವಿತುಕೊಂಡಿರಬೇಕು ಎಂಬ ಶಂಕೆ ಹಿನ್ನೆಲೆಯಲ್ಲಿ ಡ್ರೋಣ್ ಬಳಸಿ ಚಿರತೆಗಾಗಿ ಶೋಧ ನಡೆಸಲಾಗುತ್ತಿದೆ. ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಚಿರತೆ ಓಡಾಟ ನಡೆಸುತ್ತಿದೆ. ಹಾಗಾಗಿ ಸಂಜೆಯ ವೇಳೆ ರಾಜ್ ನಗರ ಸೇರಿದಂತೆ ಸುತ್ತಮುತ್ತಲಿನ ಜನರು ಹೆಚ್ಚಾಗಿ ಓಡಾಡಬಾರದು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಸೆಂಟ್ರಲ್ ಸ್ಕೂಲ್ ಬಳಿ ಚಿರತೆ ಪ್ರತ್ಯಕ್ಷ.. ಸ್ಥಳೀಯರಲ್ಲಿ ಆತಂಕ