ಧಾರವಾಡ: ಪಕ್ಷ ಅಂದ ಮೇಲೆ ಸಣ್ಣ ಪುಟ್ಟ ಭಿನ್ನಾಬಿಪ್ರಾಯಗಳು ಇರುವುದು ಸಹಜ. ಶಾಸಕರಾದವರಿಗೆ ಮಂತ್ರಿಯಾಗಬೇಕೆಂಬ ಆಸೆಯೂ ಇರುತ್ತೆ. ಇವೆಲ್ಲವನ್ನೂ ಪಕ್ಷದ ಸಭೆಯಲ್ಲಿ ಸರಿಪಡಿಸಬಹುದು ಎಂದು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಶಾಸಕ ಅಂದ ಮೇಲೆ ಸಚಿವನಾಗೋ ಆಸೆ ಸಹಜ, ಪಕ್ಷದ ಸಭೆಯಲ್ಲಿ ಎಲ್ಲವೂ ಸರಿಹೋಗುತ್ತೆ: ಬೆಲ್ಲದ ವಿಶ್ವಾಸ
ಬಿಜೆಪಿ ಪಕ್ಷದಲ್ಲಿ ಆಂತರಿಕ ಕಲಹ ದ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಶಾಸಕ ಅರವಿಂದ್ ಬೆಲ್ಲದ್, ಶಾಸಕರಾದವರಿಗೆ ಮಂತ್ರಿಯಾಗಬೇಕು ಎಂದು ಅನಿಸುವುದು ಸಹಜ, ನಮ್ಮ ಪಕ್ಷದ ಸಭೆಯಲ್ಲಿ ಮಾತನಾಡಿ ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು.
ಧಾರವಾಡದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಉಂಟಾಗಿದೆ ಎಂಬುದಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಚಿವನಾಗುವ ಆಸೆ ಇದ್ದೇ ಇರುತ್ತೆ. ಯಾವುದೇ ಸರ್ಕಾರ ಇದ್ದಾಗಲೂ ಅದು ಇದ್ದದ್ದೇ, ಇಲ್ಲಿಯೂ ಹಾಗೆಯೇ ಆಗಿರಬಹುದು. ಸದ್ಯ ಸಿಎಂ ಕೊರೊನಾ ನಿರ್ಮೂಲನೆಗಾಗಿ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಈ ಬಗ್ಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಬೆಳಗಾವಿಯಲ್ಲಿ ಬಿಜೆಪಿ ಶಾಸಕರ ಪ್ರಾಬಲ್ಯ ಇರುವುದು ನಿಜ, ಬೆಳಗಾವಿ ದೊಡ್ಡ ಜಿಲ್ಲೆ, ರಾಜ್ಯದಲ್ಲೇ ಅತೀ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ ಅದು. ಅಲ್ಲಿನ ಶಾಸಕರು ಸಚಿವ ಸ್ಥಾನ ಕೇಳುವುದು ಸಹಜ ಎಂದು ಬೆಲ್ಲದ ಸಮರ್ಥಿಸಿಕೊಂಡರು.