ಧಾರವಾಡ: ತಾಲೂಕಿನ ಮದಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಶಾಸಕ ಅಮೃತ ದೇಸಾಯಿ ವೀಕ್ಷಿಸಿದರು.
ಮದಿಕೊಪ್ಪದಲ್ಲಿ ನರೇಗಾ ಕಾಮಗಾರಿ ವೀಕ್ಷಿಸಿದ ಶಾಸಕ ಅಮೃತ ದೇಸಾಯಿ - MLA Amrita Desai
ಮದಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ಸುಮಾರು 60 ಸಾವಿರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಅರಣ್ಯೀಕರಣ ಕಾಮಗಾರಿಯನ್ನು ಶಾಸಕ ಅಮೃತ ದೇಸಾಯಿ ವೀಕ್ಷಿಸಿದರು.
ನರೇಗಾ ಕಾಮಗಾರಿ ವೀಕ್ಷಿಸಿದ ಶಾಸಕ ಅಮೃತ ದೇಸಾಯಿ
ಕೊರೊನಾ ಸಂಬಂಧ ಲಾಕ್ಡೌನ್ ಆಗಿರುವುದರಿಂದ ಬಡ ಹಾಗೂ ಮಧ್ಯಮವರ್ಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರ ಕೆಲಸ ನೀಡಿದ್ದು, ಮದಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ಸುಮಾರು 60 ಸಾವಿರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಅರಣ್ಯೀಕರಣ ಕಾಮಗಾರಿಯನ್ನು ವೀಕ್ಷಿಸಿದರು.
ನಂತರ ಶಾಸಕರು ಸರ್ಕಾರ ಹೇಳಿರುವಂತೆ ಬಡ ಜನರಿಗೆ ಕೆಲಸ ನೀಡಿದೆ. ಕೆಲಸದ ಮೂಲಕ ನಿಮ್ಮ ಕುಟುಂಬವನ್ನು ನಿರ್ವಹಣೆ ಮಾಡಿಕೊಳ್ಳಿ ಎಂದು ಶಾಸಕರು ಕೂಲಿಕಾರರಿಗೆ ಧೈರ್ಯ ಹೇಳಿದರು.