ನಿಮ್ಮೆಲ್ಲರ ಪುಣ್ಯದಿಂದ ಸಭಾಪತಿ ನಿವಾಸವನ್ನೇ ಕೊಟ್ಟಿದ್ದಾರೆ : ಬಸವರಾಜ ಹೊರಟ್ಟಿ - ವಿಧಾನಪರಿಷತ್ ಸಭಾಪತಿ
ಹಳೆ ಸಭಾಪತಿಗಳು ಅವರಿನ್ನು ಮನೆ ಬಿಟ್ಟಿಲ್ಲ. ಅವರು ಬಿಟ್ಟ ನಂತರ ಮನೆ ಪಡೆದುಕೊಳ್ಳುವಂತೆ ಪತ್ರ ಬಂದಿದೆ. ಹೀಗಾಗಿ, ಮನೆ ಪಡೆದುಕೊಳ್ಳುತ್ತೇನೆ..

ಬಸವರಾಜ ಹೊರಟ್ಟಿ ಹೇಳಿಕೆಬಸವರಾಜ ಹೊರಟ್ಟಿ ಹೇಳಿಕೆ
ಧಾರವಾಡ :ನಿನ್ನೆ ನನಗೆ ಅಧಿಕೃತ ನಿವಾಸ ಕೊಟ್ಟಿದ್ದಾರೆ. ನಿಮ್ಮೆಲ್ಲರ ಪುಣ್ಯದಿಂದ ಮನೆ ಸಿಕ್ಕಿದೆ. ಪದೇಪದೆ ನಿಮ್ಮೆಲ್ಲಾ ಮಾಧ್ಯಮಗಳಲ್ಲಿ ಸುದ್ದಿ ಬಂತಲ್ಲ. ಹೀಗಾಗಿ, ಸಭಾಪತಿ ನಿವಾಸವನ್ನೇ ಕೊಟ್ಟಿದ್ದಾರೆ. ಇವತ್ತಿನಿಂದ ಮನೆ ಪಡೆದುಕೊಳ್ಳುತ್ತೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ತಮಗೆ ಸಭಾಪತಿ ನಿವಾಸ ಕೊಟ್ಟಿರೋದಕ್ಕೆ ಹೊರಟ್ಟಿ ಅವರುಸಂತಸ ಹಂಚಿಕೊಂಡಿರುವುದು..
ಮೊದಲಿದ್ದ ಸಭಾಪತಿ ಅವರ ಮನೆಯನ್ನೇ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಬಂದ ಮೇಲೆ ಮನೆ ಕೊಟ್ಟಿದ್ದಾರೆ. ಪಡೆದುಕೊಳ್ಳುತ್ತೇನೆ ಎಂದು ಮಾಧ್ಯಮದವರೊಂದಿಗೆ ಹಾಸ್ಯವಾಗಿ ಮಾತನಾಡಿದರು.
TAGGED:
Basavaraj horatti statement