ಹುಬ್ಬಳ್ಳಿ: ಪಾಕ್ ಪರ ಘೋಷಣೆ ಪ್ರಕರಣದ ಆರೋಪಿಗಳ ಪರ ವಕೀಲರು, ಪೊಲೀಸ್ ಆಯುಕ್ತರು ಮಾಡಿದ ಕರ್ತವ್ಯ ಲೋಪದ ಆಧಾರದ ಮೆಲೆ ಜಾಮೀನು ಕೇಳಿದ್ದಾರೆ ಎಂದು ಯುವ ವಕೀಲರ ವೇದಿಕೆ ಮುಖಂಡ ಅಶೋಕ ಅಣ್ವೇಕರ ಹಾಗೂ ಶಿವಾನಂದ ವಡ್ಡಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಗಳ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರೇ ಬಾಂಡ್ ಮೇಲೆ ಬಿಡುಗಡೆ ಮಾಡಿದ್ದರು ಎಂಬುವಂತಹ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಆರೋಪಿಗಳ ಪರ ವಕೀಲರು ಜಾಮೀನು ಕೇಳಿದ್ದಾರೆ ಎಂದು ದೂರಿದರು.
ಆರೋಪಿಗಳ ಪರ ವಕೀಲ ಬಿ.ಟಿ.ವೆಂಕಟೇಶ ಅವರು ವಾದ ಮಂಡಿಸಿದ್ದು, ಹು-ಧಾ ಕಮೀಷನರ್ ದಿಲೀಪ್ 169 ಸಿಆರ್ಪಿಸಿ ಬಾಂಡ್ ಮೇಲೆ ಬಿಡುಗಡೆ ಮಾಡಿದ್ದರು ಎಂದು ವಾದ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಸರ್ಕಾರಿ ವಕೀಲರಿಂದ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುತ್ತಾರೆಂದು ಪ್ರತಿವಾದ ಮಾಡಲಾಗಿದೆ ಎಂದು ಅವರು ಹೇಳಿದರು.