ಧಾರವಾಡ: ಮಹಿಳಾ ವಕೀಲರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮಂಜುನಾಥ ಕುಸುಗಲ್ ವಿರುದ್ಧ ಜುಬಲಿ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.
ಜುಬಲಿ ವೃತ್ತದ ಬಳಿ ಜಮಾಯಿಸಿದ ವಕೀಲರು, ವಾಹನ ಸಂಚಾರ ಸಂಪೂರ್ಣ ಬಂದ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಠಾಣೆಗೆ ಮಾಹಿತಿ ಕೇಳಲು ಹೋದಾಗ ಪೊಲೀಸ್ ಅಧಿಕಾರಿ ವಕೀಲರಿಗೆ ನಿಂದಿಸಿದ್ದಾರೆಂದು ದೂರಿ, ಸಿಪಿಐ ಮಂಜುನಾಥ ಕುಸುಗಲ್ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.