ಹುಬ್ಬಳ್ಳಿ: ನೂತನ ನ್ಯಾಯಾಲಯ ಸಂಕೀರ್ಣದ ಸುತ್ತಮುತ್ತ ತಲೆ ಎತ್ತುತ್ತಿರುವ ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಲು ಸೂಚನೆ ನೀಡಬೇಕು ಎಂದು ವಕೀಲರ ಸಂಘದ ಪದಾಧಿಕಾರಿಗಳು ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ.
ನ್ಯಾಯಾಲಯ ಸಂಕೀರ್ಣ ಸುತ್ತಲಿನ ಅನಧಿಕೃತ ಅಂಗಡಿ ತೆರವಿಗೆ ವಕೀಲರ ಮನವಿ - ಪ್ರಧಾನ ಜಿಲ್ಲಾ ನ್ಯಾಯಾಧೀಶ
ವಿದ್ಯಾನಗರದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತವಾದ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಆದರೆ ಕಟ್ಟಡ ಕಾಂಪೌಂಡ್ ಪಕ್ಕದಲ್ಲಿ ಅನಧಿಕತವಾಗಿ ಅಂಗಡಿಗಳು ತಲೆಎತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ನ್ಯಾಯಾಲಯ ಸಂಕೀರ್ಣ ಸುತ್ತಲಿನ ಅನಧಿಕೃತ ಅಂಗಡಿ ತೆರವಿಗೆ ವಕೀಲರ ಮನವಿ
ನ್ಯಾಯಾಲಯ ಸಂಕೀರ್ಣದ ಬಳಿಯ ಅಂಗಡಿಗಳು
ವಿದ್ಯಾನಗರದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತವಾದ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಆದರೆ ಕಟ್ಟಡದ ಕಾಂಪೌಂಡ್ ಪಕ್ಕದಲ್ಲಿ ಅನಧಿಕೃತವಾಗಿ ಅಂಗಡಿಗಳು ತಲೆಎತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಹೀಗಾಗಿ ಪ್ರಧಾನ ನ್ಯಾಯಾಧೀಶರು ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಕಮೀಷನರ್ ಅವರಿಗೆ ಅನಧಿಕೃತ ಅಂಗಡಿ ತೆರವುಗೊಳಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು.