ಹುಬ್ಬಳ್ಳಿ:ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಜೀವ ಪಣಕ್ಕಿಟ್ಟು ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯ ನಡೆಸುವ ಆನ್ ಲೈನ್ ಹಾಗೂ ವಿಡಿಯೋ ಕಾನ್ಫರೆನ್ಸ್ ಪರೀಕ್ಷೆಯ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕಾನೂನು ವಿವಿಯಲ್ಲಿ ಆನ್‍ಲೈನ್ ಪರೀಕ್ಷೆ ಬೇಡ; ಕಾಂಗ್ರೆಸ್ ಯುವ ಮುಖಂಡ ಆಕ್ರೋಶ
ಕೊರೊನಾ ಮಹಾಮಾರಿಯ ಸೋಂಕು ಏರುಗತಿಯಲ್ಲಿರುವಾಗ ಆನ್‍ಲೈನ್ ಶಿಕ್ಷಣ ಅಥವಾ ಆನ್‍ಲೈನ್ ಪರೀಕ್ಷೆಯ ಅವಶ್ಯಕತೆ ಇಲ್ಲ ಎಂಬ ಫಲಕಗಳೊಂದಿಗೆ ಯುಜಿಸಿ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನಿರ್ಧಾರದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ಕುರಿತು ಇಂದು ಹುಬ್ಬಳ್ಳಿಯ ಕಾನೂನು ವಿವಿ ಪ್ರಾಂಶುಪಾಲರನ್ನು ಭೇಟಿಯಾಗಿ ಮನವಿ ಮಾಡಿದ್ದು, ಕೊರೊನಾ ಮಹಾಮಾರಿಯ ಸೋಂಕು ಏರುಗತಿಯಲ್ಲಿರುವಾಗ ಆನ್‍ಲೈನ್ ಶಿಕ್ಷಣ ಅಥವಾ ಆನ್‍ಲೈನ್ ಪರೀಕ್ಷೆಯ ಅವಶ್ಯಕತೆ ಇಲ್ಲ ಎಂಬ ಫಲಕಗಳೊಂದಿಗೆ ಯುಜಿಸಿ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನಿರ್ಧಾರದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದ್ದರೂ, ಕಾನೂನು ವಿವಿ ವಿದ್ಯಾರ್ಥಿಗಳಿಗೆ ಆನ್‍ಲೈನ್, ಪರೀಕ್ಷೆಯನ್ನು ನಡೆಸಿದ್ದು ಸರಿಯಲ್ಲ. ಇದು ಅತ್ಯಂತ ಪ್ರಜಾತಾಂತ್ರಿಕ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ. ಕೇವಲ ಶೇ. 33ರಷ್ಟು ಅಂತರ್ಜಾಲ ಸೌಲಭ್ಯ ಸಿಗುವ ಕುಟುಂಬಗಳು ಇರುವ ಈ ದೇಶದಲ್ಲಿ ಆನ್‍ಲೈನ್ ಶಿಕ್ಷಣ ಅಥವಾ ಆನ್‍ಲೈನ್ ಪರೀಕ್ಷೆ ಎಂಬುದು ಮೂಲದಲ್ಲಿ ಶಿಕ್ಷಣ ವಿರೋಧಿ ಕ್ರಿಯೆಯಾಗಿದೆ ಎಂದು ಅವರು ಆರೋಪಿಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.