ಹುಬ್ಬಳ್ಳಿ :ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿರುವ ಲೋಕ ತಾಂತ್ರಿಕ ಜನತಾದಳ ಪಕ್ಷ ಇದೀಗ ಕರ್ನಾಟಕದಲ್ಲೂ ಚಿಗುರಲಿದೆ. ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ ಮುಖಾಂತರ ಹುಬ್ಬಳ್ಳಿಯಲ್ಲಿ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಪಕ್ಷದ ಮುಖಂಡ ಸಲೀಂ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಯು ಹಾಗೂ ಆರ್‌ಜೆಡಿ ಪಕ್ಷಗಳು ಸೇರಿ ಮಹಾಘಟಬಂಧನ ರಚಿಸಿ ನಿತೀಶ್‌ಕುಮಾರ್ ನೇತೃತ್ವದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದರು. ನಂತರದ ದಿನಗಳಲ್ಲಿ ನಿತೀಶ್ ಘಟಬಂಧನ ತೊರೆದು ಮತ್ತೆ ಎನ್‌ಡಿಎ ಕೂಟ ಸೇರಿದ್ದರು. ಅಲ್ಲದೇ ಜಾತ್ಯಾತೀತ ಮನೋಭಾವನೆಯಿಂದ ಶರದ್ ಯಾದವ್ ನೇತೃತ್ವದಲ್ಲಿ ಲೋಕತಾಂತ್ರಿಕ ಪಕ್ಷ ಕಟ್ಟಿದ್ದರು ಎಂದರು.