ಹುಬ್ಬಳ್ಳಿ:ಲಾಕ್‌ಡೌನ್ ಮಧ್ಯೆ ಸಂತೆ ಮಾಡಲು ಮುಂದಾದ ತರಕಾರಿ ಮಾರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಕುಂದಗೋಳ ತಾಲೂಕಿನ ಸಂಶಿಯಲ್ಲಿ ನಡೆದಿದೆ.
ಲಾಕ್‌ಡೌನ್ ಚಿಂತೆ ಬಿಟ್ಟು ಸಂತೆ ಮಾಡಲು ಬಂದವರಿಗೆ ಬಿತ್ತು ಲಾಠಿ ಏಟು - ಪೊಲೀಸರು ಲಾಠಿ ರುಚಿ
ಹುಬ್ಬಳ್ಳಿಯಲ್ಲಿ ಲಾಕ್‌ಡೌನ್ ಮಧ್ಯೆಯೇ ತರಕಾರಿ ಸಂತೆ ಮಾಡಲು ಮುಂದಾಗಿದ್ದ ಮಾರಾಟಗಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಪೊಲೀಸರು
ಸಂತೆ ಮಾಡಲು ಮುಂದಾದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು
ವ್ಯಾಪಾರಿಗಳು ಲಾಕ್‌ಡೌನ್ ನಿರ್ಲಕ್ಷಿಸಿ ಬೆಳಗ್ಗೆ ತರಕಾರಿ ಸಂತೆ ಮಾಡಲು ಆಗಮಿಸಿದ್ದರು. ಈ ವೇಳೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ. ಪೊಲೀಸರ ಕೆಂಗಣ್ಣಿಗೆ ಗುರಿಯಾದ ವ್ಯಾಪಾರಸ್ಥರು ಹಾಗೂ ಗ್ರಾಹಕರು ದಿಕ್ಕಾಪಾಲಾಗಿ ಓಡಬೇಕಾಯ್ತು.
ಕಳೆದ ವಾರವೂ ಪೊಲೀಸರು ಇದೇ ರೀತಿ ಲಾಠಿ ರುಚಿತೋರಿಸಿದ್ದರು. ಆದ್ರೂ ಮತ್ತೆ ಇಂದು ಸಂತೆ ನಡೆಸಲು ವ್ಯಾಪಾರಿಗಳು ಮುಂದಾಗಿದ್ದರು.