ಕರ್ನಾಟಕ

karnataka

ETV Bharat / state

ಅನಗತ್ಯವಾಗಿ ಸಂಚರಿಸಿದವರಿಗೆ ಲಾಠಿ ರುಚಿ ತೋರಿಸಿದ ಹುಬ್ಬಳ್ಳಿ ಪೊಲೀಸರು - Hubli Police

ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ಹುಬ್ಬಳ್ಳಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ಸುಮಾರು 20 ಕ್ಕೂ ಹೆಚ್ಚು ಬೈಕ್​ಗಳನ್ನು ಸೀಜ್‌ ಮಾಡಿದ್ದಾರೆ.

Lathi Charge by Hubli Police
ಅನಗತ್ಯ ಸಂಚಾರ: ಲಾಠಿ ರುಚಿ ತೋರಿಸಿದ ಹುಬ್ಬಳ್ಳಿ ಪೊಲೀಸರು

By

Published : Jul 19, 2020, 2:04 PM IST

ಹುಬ್ಬಳ್ಳಿ: ಲಾಕ್ ಡೌನ್ ಜಾರಿಯಾದ್ರು‌‌ ಕೂಡ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ಹೀಗಾಗಿ ‌ಪೊಲೀಸರು ಬೇಕಾಬಿಟ್ಟಿ ಓಡಾಡುವವರಿಗೆ ಲಾಠಿ ರುಚಿ ತೋರಿಸಿದ್ದಾರೆ.

ಅನಗತ್ಯವಾಗಿ ಸಂಚರಿಸಿದವರಿಗೆ ಲಾಠಿ ರುಚಿ ತೋರಿಸಿದ ಹುಬ್ಬಳ್ಳಿ ಪೊಲೀಸರು

ಕೇವಲ ತುರ್ತು ಪರಿಸ್ಥಿತಿ ಮತ್ತು ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಸುಮ್ಮನೆ ಪಾಸ್ ಪಡೆದು ಓಡಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡಿ ದಂಡ ವಿಧಿಸುತ್ತಿದ್ದಾರೆ.

ದಂಡ ವಿಧಿಸಿದರೆ ದಂಡ ಕಟ್ಟಿ ಮತ್ತೆ ವಾಹನದಲ್ಲಿ ಓಡಾಡುವ ಪ್ರಕರಣಗಳು ಹೆಚ್ಚಾಗಿವೆ.‌ ಹೀಗಾಗಿ ವಾಹನಗಳನ್ನು ‌ಸೀಜ್‌ ಮಾಡಿದ್ರೆ ಓಡಾಟಕ್ಕೆ ಬ್ರೇಕ್ ಹಾಕಬಹುದು ಎಂಬ ಉದ್ದೇಶದಿಂದ ಇಂದು ಸುಮಾರು 20 ಕ್ಕೂ ಹೆಚ್ಚು ಬೈಕ್​ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ABOUT THE AUTHOR

...view details