ಹುಬ್ಬಳ್ಳಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಧಾರವಾಡದ ಇಬ್ಬರು ವ್ಯಕ್ತಿಗಳು ನಮ್ಮ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಸವಿತಾ ಎಸ್. ವೀರಾಪೂರ ಎಂಬ ಮಹಿಳೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ಅತ್ತಿಕೊಳ್ಳ ಗ್ರಾಮದಲ್ಲಿ ನಮ್ಮ ತಾಯಿ ಪಾರ್ವತಿ ಗಂಗಪ್ಪ ಜೋಗಣ್ಣವರ್ ಅವರಿಗೆ ಸೇರಿದ ಶೇತ್ಕಿ ಜಮೀನಿನ ಸರ್ವೆ ನಂಬರ್ 64ಅ 2ರ ಪೈಕಿ 9 ಎಕರೆ 10 ಗುಂಟೆ ಜಮೀನಿದೆ.
ಆಸ್ತಿ ಕಬಳಿಸಲಾಗಿದೆ ಎಂದು ನೊಂದ ಮಹಿಳೆ ಆರೋಪ ಅದರಲ್ಲಿ ದನದ ಶೆಡ್ ನಿರ್ಮಾಣಕ್ಕೆ ಭೂಮಿ ಸ್ವಚ್ಛಗೊಳಿಸಲು ಮುಂದಾದಾಗ ನಗರದ ಮುಸ್ತಫಾ ಕುನ್ನಿಭಾವಿ ಹಾಗೂ ಅಂಬರೀಶ್ ರಾಠೋಡ ಎಂಬವರು ರಾಜಶ್ರೀ ಶಿವಪ್ಪ ವಿರೇಶನ್ನವರ್, ನಾಗರತ್ನ ವಿಠ್ಠಲಮೂರ್ತಿ ಎಂಬುವರ ಹೆಸರಿನಲ್ಲಿ ಸೃಷ್ಟಿಸಿದ ಖೊಟ್ಟಿ ದಾಖಲೆಗಳನ್ನು ಇಟ್ಟುಕೊಂಡು ಆ ಜಮೀನಿನ ಐದು ಗುಂಟೆ ಜಾಗವನ್ನು ನಮಗೆ ಮಾರಾಟ ಮಾಡಿದ್ದಾರೆ ಎಂದು ತಿಳಿಸಿ ತಕರಾರು ಮಾಡಿದರಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ಕೂಡಲೇ ನಮಗೆ ನ್ಯಾಯ ದೊರಕಿಸಬೇಕು ಎಂದು ನೊಂದ ಮಹಿಳೆ ಮನವಿ ಮಾಡಿದರು.