ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ ಪ್ರತಿ ದಿನ ಲಕ್ಷಾಂತರ ಮಹಿಳೆಯರು ರಾಜ್ಯದ ವಿವಿಧೆಡೆಗೆ ಸಂಚಾರ ಮಾಡುತ್ತಿದ್ದಾರೆ. ಇನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಬರುವ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಸೇರಿ ಒಟ್ಟು 6 ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಜೂ.20 ರಂದು ಮಂಗಳವಾರ ಬರೋಬ್ಬರಿ 14,47,223 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇವರ ಪ್ರಯಾಣದ ಟಿಕೆಟ್ ಮೌಲ್ಯ ರೂ. 3,59,28,000 ಗಳಾಗಿದೆ ಎಂದು ತಿಳಿದುಬಂದಿದೆ.
ಸಾರಿಗೆ ಸಂಸ್ಥೆಯ ವಿಭಾಗವಾರು ಮಾಹಿತಿ:ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆಯಲ್ಲಿ ಒಟ್ಟು 1.90 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 22.96 ಲಕ್ಷ ರೂಪಾಯಿಯಾಗಿದೆ. ಹುಬ್ಬಳ್ಳಿ ಗ್ರಾಮಾಂತರ ಸಾರಿಗೆ ವಿಭಾಗದಲ್ಲಿ 96 ಸಾವಿರ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 33.26 ಲಕ್ಷ ರೂ. ಆಗಿದೆ. ಧಾರವಾಡ ಗ್ರಾಮಾಂತರ ಸಾರಿಗೆ ವಿಭಾಗದಲ್ಲಿ 1.22 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 32.51 ಲಕ್ಷ ರೂ. ಗಳಾಗಿದೆ. ಬೆಳಗಾವಿ ಸಾರಿಗೆ ವಿಭಾಗದಲ್ಲಿ 2.32ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 46.33 ಲಕ್ಷ ರೂ. ಗಳಾಗಿದೆ.
ಇನ್ನು, ಚಿಕ್ಕೋಡಿ ಸಾರಿಗೆ ವಿಭಾಗದಲ್ಲಿ 1.90 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 47.39 ಲಕ್ಷ ರೂ. ಗಳಾಗಿದೆ. ಬಾಗಲಕೋಟೆ ಸಾರಿಗೆ ವಿಭಾಗದಲ್ಲಿ 1.68 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 53.14 ಲಕ್ಷ ರೂ. ಗಳಾಗಿದೆ. ಗದಗ ಸಾರಿಗೆ ವಿಭಾಗದಲ್ಲಿ 1.44 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಕ್ ಮೌಲ್ಯ 42.80 ಲಕ್ಷ ರೂ. ಗಳಾಗಿದೆ. ಹಾವೇರಿ ಸಾರಿಗೆ ವಿಭಾಗದಲ್ಲಿ 1.61 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 42.09 ಲಕ್ಷ ರೂ. ಗಳಾಗಿದೆ. ಉತ್ತರ ಕನ್ನಡ ಸಾರಿಗೆ ವಿಭಾಗದಲ್ಲಿ 1.45 ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 38.80 ಲಕ್ಷ ರೂ. ಗಳಾಗಿದೆ.