ಕರ್ನಾಟಕ

karnataka

ETV Bharat / state

ಕ್ಯಾಶ್ ಬ್ಯಾಕ್ ಹಣ ಜಮೆ ಹೆಸರಲ್ಲಿ ಲಕ್ಷ ರೂಪಾಯಿ ಎಗರಿಸಿದ ವಂಚಕಿ - Lakhs of rupees stolen in the name of cash back

ನಾನು ಮುಂಬೈ ಕ್ಯಾಶ್ ಪೇ ಬ್ಯಾಂಕ್ ವಿಭಾಗದಿಂದ ಕರೆ ಮಾಡುತ್ತಿದ್ದೇನೆ ಎಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯ ಗೌಪ್ಯ ಮಾಹಿತಿ ಪಡೆದು 1 ಲಕ್ಷದ 8 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ‌.

Lakhs of rupees stolen in the name of cash back
ಕ್ಯಾಶ್ ಬ್ಯಾಕ್ ಹಣ ಜಮೆ ಹೆಸರಿನಲ್ಲಿ ಲಕ್ಷ ರೂಪಾಯಿ ಎಗರಿಸಿದ ಚಾಲಾಕಿ ಕಳ್ಳಿ

By

Published : Jun 19, 2021, 1:23 PM IST

ಹುಬ್ಬಳ್ಳಿ:ನಿಮ್ಮ ಬ್ಯಾಂಕ್ ಖಾತೆಗೆ 9,800 ರೂಪಾಯಿ ಕ್ಯಾಶ್ ಬ್ಯಾಕ್ ಹಣ ಜಮೆ ಮಾಡುತ್ತೇನೆ ಎಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯ ಗೌಪ್ಯ ಮಾಹಿತಿ ಪಡೆದು 1 ಲಕ್ಷದ 8 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ‌.

ಧಾರವಾಡ ಮೂಲದ ಸ್ಮಿತಾ ಎನ್ನುವವರಿಗೆ ಬರ್ಕಾ ಶರ್ಮಾ ಎಂಬ ಹೆಸರಿನ ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ, ನಾನು ಮುಂಬೈ ಕ್ಯಾಶ್ ಪೇ ಬ್ಯಾಂಕ್ ವಿಭಾಗದಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಕ್ರೆಡಿಟ್ ಕಾರ್ಡ್ ಕ್ಯಾಶ್ ಬ್ಯಾಕ್​ ಪಾಯಿಂಟ್ಸ್ 9800 ಆಗಿದ್ದು, ಈ ಪಾಯಿಂಟ್​​ಗಳ ಅವಧಿ ಮುಗಿಯುತ್ತಿದೆ. ಹಾಗಾಗಿ ಈ ಪಾಯಿಂಟ್​ನ ಹಣ ನಿಮ್ಮ ಖಾತೆಗೆ ಜಮೆ ಮಾಡುತ್ತೇನೆ ಎಂದು ನಂಬಿಸಿದ್ದಾಳೆ.

ಕ್ಯಾಶ್ ಬ್ಯಾಕ್ ಅಮೌಂಟ್ ವಿಚಾರ ನಂಬಿದ ಸ್ಮಿತಾರ ಹೆಚ್​ಡಿಎಫ್​ಸಿ ಹಾಗೂ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್​ಗಳ ಸಿವಿವಿ ನಂಬರ್ ಹಾಗೂ ವ್ಯಾಲಿಡಿಟಿ, ಒಟಿಪಿ ಮತ್ತಿತ್ತರ ಮಾಹಿತಿ ಪಡೆದ ವಂಚಕ ಮಹಿಳೆ, ಅಕೌಂಟ್​​ನಿಂದ ಒಂದು ಲಕ್ಷ, ಎಂಟು ಸಾವಿರ ರೂಪಾಯಿ ಹಣವನ್ನ ಆನ್​ಲೈನ್​​ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details