ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ರೈಲಿನಲ್ಲಿ ಪತ್ತೆಯಾದ ಬ್ಯಾಗ್​ನಲ್ಲಿ ಲಕ್ಷ ಮೌಲ್ಯದ ಗಾಂಜಾ! - ಹಸಿ ಗಾಂಜಾ

ಗುಂತಕಲ್ ರೈಲು ನಿಲ್ದಾಣದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಅಮರಾವತಿ ಎಕ್ಸ್​ಪ್ರೆಸ್ ರೈಲಿನಲ್ಲಿ ಅಪರಿಚಿತ ಪ್ರಯಾಣಿಕನೊಬ್ಬ ತನ್ನ ಬ್ಯಾಗ್​ ಅನ್ನು ಬಿಟ್ಟುಹೋಗಿದ್ದಾನೆ. ಇದನ್ನು ಪರಿಶೀಲನೆ ನಡೆಸಿದಾಗ ಲಕ್ಷ ಮೌಲ್ಯದ ಗಾಂಜಾ ಪತ್ತೆಯಾಗಿದೆ.

ಲಕ್ಷ ಮೌಲ್ಯದ ಗಾಂಜಾ

By

Published : Sep 14, 2021, 1:47 PM IST

ಹುಬ್ಬಳ್ಳಿ:ರೈಲಿನಲ್ಲಿ ಪ್ರಯಾಣಿಕನೊಬ್ಬ ಬಿಟ್ಟು ಹೋಗಿದ್ದ ಬ್ಯಾಗ್​ನಲ್ಲಿ ಬರೊಬ್ಬರಿ 1.12 ಲಕ್ಷ ರೂ . ಮೌಲ್ಯದ ಗಾಂಜಾ ಪತ್ತೆಯಾಗಿದೆ.

ಗುಂತಕಲ್ ರೈಲು ನಿಲ್ದಾಣದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಅಮರಾವತಿ ಎಕ್ಸ್​ಪ್ರೆಸ್ ರೈಲಿನಲ್ಲಿ ಅಪರಿಚಿತ ಪ್ರಯಾಣಿಕನೊಬ್ಬ ತನ್ನ ಬ್ಯಾಗ್​ನ್ನು ಬಿಟ್ಟುಹೋಗಿದ್ದಾನೆ. ಈ ವೇಳೆ, ಟಿಟಿಐ ಅಧಿಕಾರಿಗೆ ಸಹ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶ್ವಾನದಳದ ಮೂಲಕ ಪರಿಶೀಲನೆ ನಡೆಸಲಾಗಿದೆ. ಆ ಬಳಿಕ ಪೊಲೀಸರು ಹಾಗೂ ರೈಲ್ವೆ ಸಿಬ್ಬಂದಿ ಬ್ಯಾಗ್​ ತೆರೆದು ನೋಡಿದ್ದು ಹಸಿ ಗಾಂಜಾ ಪತ್ತೆಯಾಗಿದೆ. ಸದ್ಯ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details