ಧಾರವಾಡ :ಸೇವಾ ಭದ್ರತೆ ಒದಗಿಸುವಂತೆ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ವೇಳೆ ಉಪನ್ಯಾಸಕಿಯೊಬ್ಬರು ಪ್ರಜ್ಞೆತಪ್ಪಿ ಬಿದ್ದ ಘಟನೆ ನಡೆದಿದೆ.
ಅತಿಥಿ ಉಪನ್ಯಾಸಕರ ಪ್ರತಿಭಟನೆ ವೇಳೆ ಪ್ರಜ್ಞೆತಪ್ಪಿ ಬಿದ್ದ ಉಪನ್ಯಾಸಕಿ : ಆಸ್ಪತ್ರೆಗೆ ದಾಖಲು - ಧಾರವಾಡದಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆ
ಅತಿಥಿ ಉಪನ್ಯಾಸಕರ ಪ್ರತಿಭಟನೆ ವೇಳೆ ಉಪನ್ಯಾಸಕಿಯೋರ್ವರು ಪ್ರಜ್ಞೆತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ..
ಅತಿಥಿ ಉಪನ್ಯಾಸಕರ ಪ್ರತಿಭಟನೆ ವೇಳೆ ಜ್ಞಾನತಪ್ಪಿ ಬಿದ್ದ ಉಪನ್ಯಾಸಕಿ
ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದರು. ಈ ವೇಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ದಾನೇಶ್ವರಿ ಗುಡ್ಡದ ಎಂಬುವರು ಪ್ರಜ್ಞೆತಪ್ಪಿ ಬಿದ್ದರು.
ಕೂಡಲೇ ಸ್ಥಳದಲ್ಲಿದ್ದ ಉಳಿದ ಸಹೋದ್ಯೋಗಿಗಳು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿ.10 ರಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಪ್ರತಿಭಟನಾ ರ್ಯಾಲಿ ಡಿಸಿ ಕಚೇರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
Last Updated : Dec 29, 2021, 3:56 PM IST