ಹುಬ್ಬಳ್ಳಿ:ಪ್ರಯಾಣಿಕನ ಮೇಲೆ ರೈಲ್ವೆ ಇಲಾಖೆಯ ಮಹಿಳಾ ಪೊಲೀಸ್ ಪೇದೆವೋರ್ವರು ದರ್ಪ ತೋರಿದ್ದಾರೆ ಎಂಬ ಆರೋಪ ಪ್ರಕರಣ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ನಡೆದಿದೆ.
ಆರ್ಪಿಎಫ್ ಮಹಿಳಾ ಪೇದೆ ವಿಜಯಲಕ್ಷ್ಮಿ ಎಂಬುವರು ಪ್ರಯಾಣಿಕನ ಮೇಲೆ ದರ್ಪ ತೋರಿದ್ದಾರೆ. ಶನಿವಾರ ಸಮಜೆ ಹುಬ್ಬಳ್ಳಿ-ಚೆನ್ನೈ ರೈಲು ಚಾಲನೆಗೆ ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ್ ಜೋಶಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ಮೇಲೆ ರೈಲು ನಿಲ್ದಾಣದ ಮುಖ್ಯ ಗೇಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಲಕ್ಷ್ಮಿ ಅವರು ರೈಲ್ವೆ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಪ್ರಯಾಣಿಕನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗ್ತಿದೆ.