ಧಾರವಾಡ:ಕೊರೊನಾ ಲಾಕ್‌ಡೌನ್ ಮಾಡಿರುವುದರಿಂದ ಜಿಲ್ಲೆಯಲ್ಲಿ ತನ್ನ 2 ವಾರದ ಹಸುಗೂಸಿನೊಂದಿಗೆ ಬಾಣಂತಿ ಟಾಟಾ ಏಸ್ ವಾಹನದಲ್ಲಿ ದಿನ ದೂಡುವ ಪರಿಸ್ಥಿತಿ ಎದುರಾಗಿದೆ.
ಟಾಟಾ ಏಸ್ ವಾಹನವನ್ನೇ ಮನೆ ಮಾಡಿಕೊಂಡು ಬಾಣಂತಿ, ಹಸುಗೂಸು ಆರೈಕೆ - ಬಾಣಂತಿ
ಲಾಕ್‌ಡೌನ್ ಪರಿಣಾಮ ಟಾಟಾ ಏಸ್ ವಾಹನದಲ್ಲೇ ಬಾಣಂತಿ ಹಾಗೂ ಹಸುಗೂಸು ಆರೈಕೆ ಮಾಡಿಸಿಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಬಣದೂರ ಗ್ರಾಮದ ಹೊರವಲಯದಲ್ಲಿ ಗೂಡ್ಸ್ ವಾಹನವನ್ನೇ ಮನೆ ಮಾಡಿಕೊಂಡು ಅದರಲ್ಲಿ ತನ್ನ ಹಸುಗೂಸು ಪಾಲನೆ ಮಾಡುತ್ತಿರುವ ಮನಕಲುಕುವ ದೃಶ್ಯ ಕಂಡು ಬಂದಿದೆ.
ಲಾಕ್ಡೌನ್ಗೂ ಮುಂಚೆ ಧಾರವಾಡ ಹಾಗೂ ಹಾವೇರಿ ಭಾಗದ ಹೆಳವರು ಧಾರವಾಡ ಜಿಲ್ಲೆಯ ಹಳಿಯಾರ ರಸ್ತೆಯ ಹಳ್ಳಿಗಳಲ್ಲಿ ಸಂಚಾರ ಮಾಡುತ್ತ ಬಣದೂರ ಗ್ರಾಮದ ಹೊರ ವಲಯದಲ್ಲಿ ಕ್ಯಾಂಪ್ ಹಾಕಿಕೊಂಡಿದ್ದರು. ಇನ್ನೇನು ತಮ್ಮ ಊರುಗಳನ್ನು ಸೇರಬೇಕು ಎನ್ನುವಾಗ ಕೊರೊನಾ ಲಾಕ್‌ಡೌನ್ ಜಾರಿಯಾಗಿ ಇವರೆಲ್ಲ ಬಣದೂರ ಬಯಲಿನಲ್ಲಿ ಲಾಕ್ ಆಗಿ ಬಿಟ್ರು. ಇದೇ ವೇಳೆ ಕ್ಯಾಂಪ್ನಲ್ಲಿದ್ದ ಬಸವ್ವ ಎಂಬುವವರ ಮಗಳು ಸರಸ್ವತಿ ತುಂಬು ಗರ್ಭಿಯಾದ್ದರಿಂದ ಕಳೆದ 2 ವಾರಗಳ ಹಿಂದೆ ಆಸ್ಪತ್ರೆಯಲ್ಲಿ ಹೆರಿಗೆ ಕೂಡ ಆಗಿದೆ.
ಹೀಗಾಗಿ ಟಾಟಾ ಏಸ್ ಹಿಂಭಾಗಕ್ಕೆ ಕೌದಿಗಳನ್ನು ಹಾಕಿ ಕೋಣೆಯನ್ನಾಗಿ ಮಾಡಿ ಅದರಲ್ಲೇ ಬಾಣಂತಿ ಹಾಗೂ ಮಗುವಿನ ಆರೈಕೆ ನಡೆಯುತ್ತಿದೆ.