ಹುಬ್ಬಳ್ಳಿ :ಲಾಕ್ಡೌನ್ನಿಂದಾಗಿವಾಣಿಜ್ಯ ನಗರಿಯ ಹೊಸೂರು ಕ್ರಾಸ್ ಬಳಿ ಇರುವ ಕಲ್ಲು ಒಡೆಯುವ ಜನರು ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ.
ಕಲ್ಲು ಒಡೆಯುವ ಕುಟುಂಬಗಳ ಮೇಲೆ 'ಚಪ್ಪಡಿ ಕಲ್ಲು' ಎಳೆದ ಕೊರೊನಾ.. - hubli news
ಅಕ್ಕಿ, ಬೇಳೆ ಸರ್ಕಾರದಿಂದ ಸಿಕ್ಕಿದೆ. ಅದನ್ನು ಹೊರತುಪಡಿಸಿದ್ರೆ, ನಮಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಂಕಷ್ಟದಲ್ಲಿವೆ ಕಲ್ಲು ಒಡೆಯುವವರ ಕುಟುಂಬಗಳು..

ಸಂಕಷ್ಟದಲ್ಲಿ ಕಲ್ಲು ಒಡೆಯುವ ಕುಟುಂಬಗಳು
ನಿತ್ಯವೂ ಹಳ್ಳಿಗಳಿಗೆ ತೆರಳಿ ಒಳಕಲ್ಲು, ಕಾಳು ಬೀಸುವ ಕಲ್ಲು, ರುಬ್ಬುವ ಕಲ್ಲನ್ನು ತಯಾರಿಸಿ ಅದರಿಂದ ಬಂದ ಆದಾಯದಲ್ಲೇ ಜೀವನ ನಡೆಸುತ್ತಿದ್ದರು. ಆದರೀಗ ಲಾಕ್ಡೌನ್ನಿಂದಾಗಿ ಆಗಿದ್ದು ಎಲ್ಲಿಯೂ ತೆರಳದೆ ಮನೆಯ ಮುಂದೆಯೇ ಕಲ್ಲಿನ ವಸ್ತುಗಳನ್ನ ತಯಾರಿಸುತ್ತಿದ್ದಾರೆ. ಅಕ್ಕಿ, ಬೇಳೆ ಸರ್ಕಾರದಿಂದ ಸಿಕ್ಕಿದೆ. ಅದನ್ನು ಹೊರತುಪಡಿಸಿದ್ರೆ, ನಮಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸಂಕಷ್ಟದಲ್ಲಿವೆ ಕಲ್ಲು ಒಡೆಯುವವರ ಕುಟುಂಬಗಳು..
ಸರ್ಕಾರ ಈಗಾಗಲೇ ಮತ್ತೊಂದು ಹಂತದ ವಿಶೇಷ ಪ್ಯಾಕೇಜ್ ಘೋಷಿಸಲು ಹೊರಟಿದೆ. ಇಂಥ ಬಡ ಕಾರ್ಮಿಕರನ್ನ ಗಮನದಲ್ಲಿಟ್ಟುಕೊಂಡು ಪರಿಹಾರ ಘೋಷಣೆ ಮಾಡಬೇಕಿದೆ.