ಹುಬ್ಬಳ್ಳಿ :ಕೊರೊನಾ ಮಹಾಮಾರಿಯಿಂದ ಹಲವಾರು ಕ್ಷೇತ್ರಗಳು ನಲುಗಿವೆ. ಜಿಮ್ ಮಾಲೀಕರು ಸಹ ಆದಾಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ, ಎಲ್ಲಾ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸುವಂತೆ ಆದೇಶಿಸಿದ ಪರಿಣಾಮ ಜಿಮ್‌ಗಳನ್ನೂ ಕೂಡ ಬಂದ್ ಮಾಡಲಾಯಿತು. ಇದರಿಂದಾಗಿ ಇದನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಎರಡು ತಿಂಗಳಿಂದ ಕೈಯಲ್ಲಿ ಕೆಲಸವಿಲ್ಲದೇ ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿವೆ.
ಇದೀಗ ಲಾಕ್ಡೌನ್ ಸಡಿಲಿಕೆಯಿಂದ ಜಿಮ್ ಪ್ರಾರಂಭ ಮಾಡಲು ಅನುಮತಿ ನೀಡುತ್ತಾರೆ ಎಂಬ ಭರವಸೆಯಲ್ಲಿ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದಾರೆ. ಸರ್ಕಾರ ಆದೇಶ ನೀಡಿದರೂ ಕೂಡ ಜಿಮ್ ಆಸಕ್ತರು ಬರುವ ನಿರೀಕ್ಷೆ ಕಡಿಮೆ ಇದೆ.
ಫಿಟ್ನೆಸ್ ಕಳೆದುಕೊಂಡು ಸೊರಗಿದ ಜಿಮ್‌ಗಳು.. ಜಿಮ್ ಬಾಡಿಗೆ ಹಾಗೂ ಟ್ರೈನರ್ಗಳಿಗೆ ಕೊಡಲು ಹಣವಿಲ್ಲದೆ ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಜಿಮ್ ತೆರೆಯಲು ಅವಕಾಶ ನೀಡಿದ್ರೆ, ಮುಂಜಾಗ್ರತಾ ಕ್ರಮವಾಗಿ ಮಾಸ್ಕ್, ಸ್ಯಾನಿಟೈಜರ್, ಸ್ಕ್ರೀನಿಂಗ್ ಟೆಸ್ಟ್ಗೆ ಒಳಪಡಿಸಿಯೇ ಒಳಗಡೆಗೆ ಬರಲು ಅವಕಾಶ ಮಾಡಿಕೊಡಲು ಫಿಟ್ನೆಸ್ ಸೆಂಟರ್‌ಗಳು ಸಿದ್ಧತೆ ನಡೆಸಿವೆ.
ಸಂಕಷ್ಟಕ್ಕೀಡಾಗಿರುವ ಫಿಟ್ನೆಸ್ ಕೇಂದ್ರಗಳಿಗೂ ಸರ್ಕಾರಪರಿಹಾರ ನೀಡಬೇಕೆಂದು ಜಿಮ್ ಮಾಲೀಕರು ಮನವಿ ಮಾಡಿದ್ದಾರೆ.