ಧಾರವಾಡ:ಸದಸ್ಯರ ಕೋರಂ ಕೊರೆತೆಯಿಂದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಇನ್ನೂ ಆರಂಭಗೊಂಡಿಲ್ಲ. ಇದರಿಂದ ಅಧಿಕಾರಿಗಳು ಕಾಯುತ್ತಾ ಕುಳಿತಿದ್ದರು.
ಬೆಳಗ್ಗೆ 11.30ಕ್ಕೆ ಜಿಪಂ ಸಾಮಾನ್ಯ ಸಭೆ ಆರಂಭಗೊಳ್ಳಬೇಕಿತ್ತು. ಆದ್ರೆ ಸಭೆ ನಡೆಸಬೇಕಾದ್ರೆ ಸದಸ್ಯರ ಕೋರಂ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಒಂದೂವರೆ ಗಂಟೆಯಾದರೂ ಸಭೆ ಆರಂಭಗೊಂಡಿರಲಿಲ್ಲ. ಇದರಿಂದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ. ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಜಿಪಂ ಅಧ್ಯಕ್ಷೆ, ವಿಜಯಲಕ್ಷ್ಮಿ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿದಂತೆ ಸದಸ್ಯರಿಗಾಗಿ ಕಾಯುತ್ತಾ ಸಭೆಯ ಸಭಾಂಗಣದಲ್ಲಿ ಕುಳಿತಿದ್ದರು.