ಹುಬ್ಬಳ್ಳಿ: ಇಲ್ಲಿನ ನವಲಗುಂದ ತಾಲೂಕಿನ ಕಾಲವಾಡ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿನ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಮಳೆಯಾದ್ರೆ ರಸ್ತೆಗಳು ಕೆಸರು ತುಂಬಿರುವ ಗದ್ದೆಗಳಂತಾಗಿ ಜನ ಓಡಾಡಲು ಹರಸಾಹಸವೇ ಪಡುವಂತಾಗಿದೆ.
ಈ ಊರಲ್ಲಿ ರಸ್ತೆ, ವಿದ್ಯುತ್, ಕುಡಿಯೋ ನೀರು ಮರೀಚಿಕೆ.. ಜನಪ್ರತಿನಿಧಿಗಳು ಇದ್ದೂ ಇಲ್ಲದಂತೆ - Road disconnection
ಕೇಂದ್ರ ಹಾಗೂ ರಾಜ್ಯ ಸರ್ಕಾರ ಅದೆಷ್ಟೋ ಯೋಜನೆ ಜಾರಿಗೊಳಿಸಿದ್ರೂ ಕೂಡ ಈ ಗ್ರಾಮಕ್ಕೆ ಮಾತ್ರ ನಯಾಪೈಸೆ ಉಪಯೋಗವಾಗಿಲ್ಲ..
ರಸ್ತೆ, ವಿದ್ಯುತ್, ನೀರಿನ ಸೌಕರ್ಯದಿಂದ ದೂರವೇ ಉಳಿದ ಹಳ್ಳಿಗಾಡು..ಕೇಳೋರೆ ಇಲ್ಲ ಜನರ ಪಾಡು..
ಸೂಕ್ತ ರಸ್ತೆ ಇಲ್ಲ, ಕುಡಿಯಲು ಶುದ್ಧ ನೀರಿಲ್ಲ, ಕರೆಂಟ್ ಸಮಸ್ಯೆಯಂತೂ ಹೇಳತೀರದು. ಇಂತಹ ಸಮಸ್ಯೆಗಳ ಮಧ್ಯೆ ಜೀವನ ಹೇಗೆ ನಡೆಸಬೇಕು ಎಂದು ಊರ ಜನರು ಪ್ರಶ್ನಿಸುತ್ತಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಅದೆಷ್ಟೋ ಯೋಜನೆ ಜಾರಿಗೊಳಿಸಿದ್ರೂ ಕೂಡ ಈ ಗ್ರಾಮಕ್ಕೆ ಮಾತ್ರ ನಯಾಪೈಸೆ ಉಪಯೋಗವಾಗಿಲ್ಲ. ಅಲ್ಲದೆ ಚುನಾವಣೆ ಆಗಮಿಸಿದಾಗ ಮಾತ್ರ ಭರವಸೆಗಳ ಮಹಾಪೂರ ಹೊತ್ತುತರುವ ಅಧಿಕಾರಿಗಳು, ಜನಪ್ರತಿನಿಧಿಗಳು ಚುನಾವಣೆಯ ಬಳಿಕ ಈ ಗ್ರಾಮದ ಕಡೆಗೆ ತಿರುಗಿಯೂ ನೋಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.