ಕರ್ನಾಟಕ

karnataka

ETV Bharat / state

ಬಿಆರ್​ಟಿಸಿ ಆಧಿಕಾರಿಗಳ ನಿರ್ಲಕ್ಷ್ಯ: ಕಸದ ತೊಟ್ಟಿಯಾದ ಚಿಗರಿ ಮಾರ್ಗದ ಮೇಲ್ಸೇತುವೆ - ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಬಿಆರ್ ಟಿಎಸ್ ಬಸ್ ಸೇವೆ

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಚಿಗರ ಬಸ್​ ಸಂಚರಿಸುವ ಪ್ರತ್ಯೇಕ ರಸ್ತೆಯ ಮೇಲ್ಸೇತುವೆಗಳ ಕೆಳಭಾಗದಲ್ಲಿ ಸ್ವಚ್ಛತೆ ಕಾಪಾಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

Lack of cleanliness in BR TC Flyover
ಕಸದ ತೊಟ್ಟಿಯಾದ ಚಿಗರಿ ಮಾರ್ಗದ ಮೇಲ್ಸೇತು

By

Published : Apr 3, 2021, 6:26 PM IST

ಹುಬ್ಬಳ್ಳಿ : ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಚಿಗರಿ ಬಸ್ ಓಡಾಡಲು ಪ್ರತ್ಯೇಕ ರಸ್ತೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಕೆಲವೆಡೆ ಮೇಲ್ಸೇತುವೆ ಕೆಳಗೆ ಸ್ವಚ್ಛತೆ ಕಾಪಾಡದಿರುವುದು ಜನರ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹು -ಧಾ ನಡುವಿನ ಉಣಕಲ್ಲ​ ಕ್ರಾಸ್, ಉಣಕಲ್ಲ ಕೆರೆ ಹಾಗೂ ನವನಗರದ ಬಳಿ ಸುಮಾರು 1.8 ಕಿ.ಮೀ ಮೇಲ್ಸೇತುವೆಯಿದೆ. ಈ ಪ್ರದೇಶವನ್ನು ಇತರ ಕಾರ್ಯಗಳಿಗೆ ಸದ್ಬಳಕೆ ಮಾಡದಿರುವುದರಿಂದ ಮತ್ತು ಅಂದ ಹೆಚ್ಚಿಸದ ಕಾರಣ ಜನರು ಕಸ ಹಾಕಿ ಡಂಪಿಂಗ್ ಯಾರ್ಡ್ ರೀತಿ ಮಾಡಿಕೊಂಡಿದ್ದಾರೆ. ಜೊತೆಗೆ ಮೇಲ್ಸೇತುವೆ ಕೆಳಗೆ ಬೇಕಾಬಿಟ್ಟಿ ಜಾಹೀರಾತು ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ. ಹೀಗಾಗಿ, ಮೇಲ್ಸೇತುವೆ ಕೆಳಭಾಗ ಕಸದ ತೊಟ್ಟಿಯಂತಾಗಿದೆ.

ಓದಿ : ರಸ್ತೆಗಿಳಿದ ಹು-ಧಾ ಪೊಲೀಸರು ; ಕೋವಿಡ್​ ನಿಯಮ ಉಲ್ಲಂಘಿಸಿದವ್ರಿಗೆ ದಂಡದ ಬಿಸಿ!

ಬಿಆರ್‌ಟಿಎಸ್ ಈ ಪ್ರದೇಶದ ಅಂದ ಹೆಚ್ಚಿಸುವ ಕಾರ್ಯ ಮಾಡಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇಲ್ಸೇತುವೆಯ ಕೆಳಭಾಗ ಕಸದ ತೊಟ್ಟಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details