ಹುಬ್ಬಳ್ಳಿ: ಕುಂದಗೋಳ ಉಪ ಕದನದಲ್ಲಿ ಉಸ್ತುವಾರಿ ವಹಿಸಿ ಕುಸುಮಾ ಶಿವಳ್ಳಿ ಗೆಲುವು ಸಾಧಿಸುವಲ್ಲಿ ಮುಖ್ಯ ಪಾತ್ರವಹಿಸಿದ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ನೂತನ ಶಾಸಕಿ ಕುಸುಮಾ ಶಿವಳ್ಳಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸರ್ ಥ್ಯಾಂಕ್ ಯೂ ವೆೆರಿ ಮಚ್.. ಸಚಿವ ಡಿಕೆಶಿ ಕಾಲಿಗೆರಗಿ ಕೃತಜ್ಞತೆ ಸಲ್ಲಿಸಿದ ಶಾಸಕಿ ಕುಸುಮಾ ಶಿವಳ್ಳಿ - ಕುಂದಗೋಳ
ಕುಸುಮಾ ಶಿವಳ್ಳಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಉಪ ಚುನಾವಣೆ ಗೆಲುವಿಗೆ ಉಸ್ತುವಾರಿವಹಿಸಿದ್ದ ಸಚಿವ ಡಿಕೆಶಿ ಅವರಿಗೆ ಕೃತಜ್ಞತೆ ತಿಳಿಸಿದರು.
ಡಿಕೆಶಿಗೆ ಕೃತಜ್ಞತೆ ಸಲ್ಲಿಸಿದ ಕುಸುಮಾ ಶಿವಳ್ಳಿ
ನಿನ್ನೆ ಸ್ಪೀಕರ್ ರಮೇಶ್‌ಕುಮಾರ್ ಅವರಿಂದ ಪ್ರಮಾಣ ವಚನ ಸ್ವೀಕಾರ ಮಾಡಿದ ಕುಸುಮಾ ಶಿವಳ್ಳಿ, ಇವತ್ತು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಕುಟುಂಬ ಸಮೇತರಾಗಿ ಆಗಮಿಸಿದ ಕುಸುಮಾ ಶಿವಳ್ಳಿ, ಉಪ ಚುನಾವಣೆ ಗೆಲುವಿಗೆ ಉಸ್ತುವಾರಿವಹಿಸಿದ್ದ ಸಚಿವ ಡಿಕೆಶಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಸಚಿವರ ಕಾಲಿಗೆರಗುತ್ತಿದ್ದಂತೆಯೇ ಕುಸುಮಾ ಅವರಿಗೆ ಡಿಕೆಶಿ ಆಶೀರ್ವದಿಸಿದರು.