ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮ ಪಂಚಾಯತ್ ಸ್ವ ದಿಗ್ಬಂಧನ ಹಾಕಿಕೊಂಡಿದೆ. ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ರಸ್ತೆ ಬಂದ್ ಮಾಡಿ ಮುಳ್ಳಿನ ಬೇಲಿ ನಿರ್ಮಿಸಿ ಗ್ರಾಮದ ಸಂಪರ್ಕ ಕಡಿತ ಮಾಡಿದೆ.
ಕೊರೊನ ತಡೆಗಟ್ಟಲು ಕೂಬಿಹಾಳದಲ್ಲಿ ಗ್ರಾಮಸ್ಥರ ಸ್ವದಿಗ್ಬಂಧನ - ಸ್ವದಿಗ್ಬಂದನ
ಹುಬ್ಬಳ್ಳಿಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಗಲು ರಾತ್ರಿ ಶ್ರಮಿಸುತ್ತಿದೆ. ಇದಕ್ಕೆ ಗ್ರಾಮ ಪಂಚಾಯತಿಯೊಂದು ಕೈ ಜೋಡಿಸಿದೆ.
ಸ್ವದಿಗ್ಬಂಧನ
ಗ್ರಾಮದ ವಿವಿಧ ಕಡೆಗಳಲ್ಲಿರುವ ಕಟ್ಟೆಗಳ ಮೇಲೆ ಸುಟ್ಟ ಆಯಿಲ್ ಹಾಕುವ ಮೂಲಕ ಸಾರ್ವಜನಿಕರು ಕಟ್ಟೆಗಳ ಮೇಲೆ ಗುಂಪು ಗುಂಪಾಗಿ ಕುಳಿತು ಮಾತು ಹೊಡೆಯುವದಕ್ಕೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ಗ್ರಾಮ ಪಂಚಾಯಿತಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮಾದರಿಯಾಗಿದೆ.