ಕರ್ನಾಟಕ

karnataka

ETV Bharat / state

ಕವಿವಿ ಘಟಿಕೋತ್ಸವ.. 9 ಬಂಗಾರದ ಪದಕಕ್ಕೆ ಮುತ್ತಿಕ್ಕಿದ ರೈತನ ಮಗಳು.. ಇವಳು ಹೆಮ್ಮೆಯ ಕನ್ನಡತಿ.. - ಲಕ್ಷ್ಮೀ ದೊಡ್ಡಗೌಡರ

ಸವಣೂರು ತಾಲೂಕಿನ ನಾಯಿಕೆರೂರು ಗ್ರಾಮದ ಬಸನಗೌಡ ಹಾಗೂ ಚೆನ್ನವ್ವ ಎಂಬುವರ ಮಗಳು ಲಕ್ಷ್ಮಿ ದೊಡ್ಡಗೌಡರ ಈ ಸಾಧನೆ ಮಾಡಿದವರು. ಕವಿವಿ ಆರ್ ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಒಂಬತ್ತು ಬಂಗಾರದ ಪದಕ ಪಡೆದುಕೊಂಡಿದ್ದಾರೆ..

ಲಕ್ಷ್ಮೀ
ಲಕ್ಷ್ಮೀ

By

Published : Oct 9, 2021, 4:59 PM IST

ಧಾರವಾಡ : ಈ ಯುವತಿ ಮೂಲತಃ ಕೃಷಿ ಪ್ರಧಾನ ಕುಟುಂಬದಿಂದ ಬಂದವಳು. ಪೋಷಕರು ತಾವು ಕಲಿಯದಿದ್ದರೂ, ನಮ್ಮ ಮಗಳಾದರೂ ಹೆಚ್ಚಿನ ವ್ಯಾಸಂಗ ಮಾಡಲಿ ಎಂದು ಆಶಿಸಿ ಓದಿಸಿದ್ದಾರೆ. ಪೋಷಕರ ಆಸೆಯಂತೆ ಚೆನ್ನಾಗಿ ಓದಿದ ಯುವತಿ ಇಂದು 9 ಬಂಗಾರದ ಪದಕಗಳನ್ನು ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

9 ಬಂಗಾರದ ಪದಕಕ್ಕೆ ಮುತ್ತಿಕ್ಕಿದ ರೈತನ ಮಗಳು ಲಕ್ಷ್ಮಿ..

ಹಾವೇರಿ‌ ಜಿಲ್ಲೆಯ ಸವಣೂರು ತಾಲೂಕಿನ ನಾಯಿಕೆರೂರು ಗ್ರಾಮದ ಬಸನಗೌಡ ಹಾಗೂ ಚೆನ್ನವ್ವ ಎಂಬುವರ ಮಗಳು ಲಕ್ಷ್ಮಿ ದೊಡ್ಡಗೌಡರ ಈ ಸಾಧನೆ ಮಾಡಿದವರು. ಕವಿವಿ ಆರ್ ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಒಂಬತ್ತು ಬಂಗಾರದ ಪದಕ ಪಡೆದುಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ 70 ಹಾಗೂ 71ನೇ ಘಟಿಕೋತ್ಸವದ ಪ್ರಶಸ್ತಿ ಪದಕ ಪ್ರದಾನ ಕಾರ್ಯಕ್ರಮ ಇಂದು ನೆರವೇರಿತು.

ಇದನ್ನೂ ಓದಿ: Watch : ಪಟಾಕಿ-ತಮಟೆ ಸದ್ದಿಗೆ ಬೆಚ್ಚಿದ ಆನೆಗಳು : ಮಾವುತರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಇನ್ನುಳಿದಂತೆ 71ನೇ ಘಟಿಕೋತ್ಸವದಲ್ಲಿ ಕವಿವಿ ಪತ್ರಿಕೋದ್ಯಮ ವಿಭಾಗದ ಪ್ರೀತಿ ಕಾಮತ್ 9 ಬಂಗಾರದ ಪದಕ ಹಾಗೂ 70ನೇ ಘಟಿಕೋತ್ಸವದಲ್ಲಿ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನ ಪುಷ್ಪಾವತಿ ನಾಯಕ್ 9 ಚಿನ್ನದ ಪದಕ ಪಡೆಯುವ ಮೂಲಕ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ.

ABOUT THE AUTHOR

...view details