ಕರ್ನಾಟಕ

karnataka

ETV Bharat / state

KSRTC ನಷ್ಟಕ್ಕೆ ಮಿಡಿದ ಜೀವ:  ನನಗೆ 2 ತಿಂಗಳು ವೇತನ ಬೇಡ ಎಂದ ಸಾರಿಗೆ ಸಂಸ್ಥೆ ನೌಕರ! - ksrtc employee refused to take salary

ಧಾರವಾಡದ ವಿಭಾಗದ ದಾಂಡೇಲಿ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಎಸ್​​ಆರ್​​ಟಿಸಿ ಸಿಬ್ಬಂದಿಯೊಬ್ಬರು ಕೊರೊನಾ ಬಿಕ್ಕಟ್ಟಿನಿಂದ ಇಲಾಖೆ ನಷ್ಟದಲ್ಲಿರುವ ಹಿನ್ನೆಲೆ 2 ತಿಂಗಳು ವೇತನ ರಹಿತ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.

ksrtc employee refused to take salary
2 ತಿಂಗಳು ವೇತನ ಬೇಡ ಎಂದ ಸಾರಿಗೆ ಸಂಸ್ಥೆ ನೌಕರ

By

Published : Jun 20, 2020, 11:30 AM IST

ಧಾರವಾಡ:ಕೊರೊನಾ ಲಾಕ್​ಡೌನ್​​ ಸಂದರ್ಭದಲ್ಲಿ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯೊಬ್ಬರು ಸಂಸ್ಥೆಯ ಆರ್ಥಿಕ ಸಂಕಷ್ಟಕ್ಕೆ ಮಿಡಿದು ತಮ್ಮ 2 ತಿಂಗಳ ವೇತನ ನಿರಾಕರಿಸಿ ವೇತನ ರಹಿತ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದಾರೆ.

2 ತಿಂಗಳು ವೇತನ ಬೇಡ ಎಂದ ಸಾರಿಗೆ ಸಂಸ್ಥೆ ನೌಕರ
ಧಾರವಾಡ ವಿಭಾಗದ ದಾಂಡೇಲಿ ಘಟಕದಲ್ಲಿ ಕೆಎಸ್ಟಿ ಕಾನ್ಸ್​​ಟೇಬಲ್ ಆಗಿರುವ ಎಲ್.ಆರ್ ಬೂದಿಹಾಳ ಅವರು ತಮ್ಮ ಎರಡು ತಿಂಗಳ ವೇತನ ಪಾವತಿ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಸಂಸ್ಥೆಯ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದ್ರೆ ಲಾಕ್​ಡೌನ್​​ಹಂತಹಂತವಾಗಿ ಸಡಿಲಿಕೆಯಾದ ಬೆನ್ನಲ್ಲೆ ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ ನಿರೀಕ್ಷಿತ ಆದಾಯ ಬರುತ್ತಿಲ್ಲ, ಇಂತಹ ಸಂದರ್ಭದಲ್ಲಿ ಸಂಸ್ಥೆಯಿಂದ ಪೂರ್ಣ ಪ್ರಮಾಣದ ವೇತನ ಬಯಸುವುದು ಸರಿಯಲ್ಲ ಎಂದು 2 ತಿಂಗಳ ವೇತನ ರಹಿತ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಬೂದಿಹಾಳ ಕಳೆದ 34 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ, ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.‌ ಧಾರಾವಾಹಿ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟನೆ ಕೂಡಾ ಮಾಡಿದ್ದಾರಂತೆ. ಇವರು ಸಂಸ್ಥೆ ಮೇಲಿಟ್ಟಿರುವ ಅಭಿಮಾನ, ಕಾಳಜಿಗೆ ಘಟಕದ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details