ಹುಬ್ಬಳ್ಳಿಯಲ್ಲಿ ಸೋಮವಾರದಿಂದ ಬಸ್ ಸಂಚಾರ ಆರಂಭಕ್ಕೆ ಸಿದ್ಧತೆ - Hubli
ಇದೇ ಭಾನುವಾರ ಲಾಕ್ಡೌನ ಮುಗಿಯಲಿದೆ. 17ರ ನಂತರ ಅಂದರೆ ಸೋಮವಾರದಿಂದ ಲಾಕ್ಡೌನ್ನ ಹೊಸ ನಿಯಮಗಳೊಂದಿಗೆ ಬಸ್ ಸಂಚಾರ ಆರಂಭವಾಗಲಿದೆ.
ಹುಬ್ಬಳ್ಳಿ: ಮಾರ್ಚ್ 21ರಿಂದ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆ ನಗರ ಸಾರಿಗೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಇದೀಗ ಕೊರೊನಾ ಭೀತಿ ಸ್ವಲ್ಪ ಕಡಿಮೆಯಾಗಿರುವುದರಿಂದ ಮೇ 17ರ ನಂತರ ವಾಯುವ್ಯ ಕರ್ನಾಟಕ ಸಾರಿಗೆ ಸಂಚಾರ ಆರಂಭಿಸಲು ಸಜ್ಜಾಗುತ್ತಿದೆ.
ಹೌದು, ನಗರದಲ್ಲಿ 30 ಬಸ್ಸುಗಳು ಸಂಚರಿಸಲಿವೆ. ಹುಬ್ಬಳ್ಳಿ-ಧಾರವಾಡದ ನಡುವೆ 30 ಬಸ್ಗಳು ಓಡಾಟ ಆರಂಭಿಸಲು ಸಜ್ಜಾಗಿವೆ. ಹಾಗಯೇ 25 ಬಸ್ಗಳನ್ನು ನಗರದಿಂದ ಗ್ರಾಮೀಣ ಭಾಗಕ್ಕೆ ಸಂಚಾರ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಗದಿತ ಪ್ರದೇಶಗಳಿಗೆ ಮಾತ್ರ ಬಸ್ಗಳನ್ನು ಓಡಿಸಲು ವಾಯುವ್ಯ ಸಾರಿಗೆ ಇಲಾಖೆ ಸಜ್ಜಾಗಿದೆ. ನಗರದ ಗೋಕುಲ ರಸ್ತೆಯಲ್ಲಿರುವ ಹೊಸ್ ಬಸ್ ನಿಲ್ದಾಣದಲ್ಲಿ ಎಲ್ಲ ಬಸ್ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
ಇದೇ ಭಾನುವಾರ ಲಾಕ್ಡೌನ ಮುಗಿಯಲಿದೆ. 17ರ ನಂತರ ಅಂದರೆ ಸೋಮವಾರದಿಂದ ಲಾಕ್ಡೌನ್ನ ಹೊಸ ನಿಯಮಗಳೊಂದಿಗೆ ಬಸ್ ಸಂಚಾರ ಆರಂಭವಾಗಲಿದೆ. ಹುಬ್ಬಳ್ಳಿ ವಿಭಾಗದಿಂದ ಒಟ್ಟು 85 ಬಸ್ಗಳ ಸಂಚಾರ ಆರಂಭಿಸಲು ಸಾರಿಗೆ ಇಲಾಖೆ ಸಜ್ಜಾಗಿದ್ದು, ಜಿಲ್ಲಾಡಳಿತದ ಹೊಸ ಮಾರ್ಗಸೂಚಿಯಂತೆ ಸಂಚಾರ ಆರಂಭಗೊಳ್ಳಲಿದೆ.