ಧಾರವಾಡ: ಕ್ಷತ್ರೀಯರಿಗೆ ರಾಜ್ಯ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲು ಒತ್ತಾಯಿಸಿ ಕ್ಷತ್ರೀಯ ಒಕ್ಕೂಟದ ಸದಸ್ಯರು ಆಗ್ರಹಿಸಿದ್ದಾರೆ.
ಕ್ಷತ್ರೀಯ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡಲು ಆಗ್ರಹ - Kshatriya comunity demonds DCM post for their comunity person
ಕ್ಷತ್ರೀಯರಿಗೆ ರಾಜ್ಯ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲು ಒತ್ತಾಯಿಸಿ ಕ್ಷತ್ರೀಯ ಒಕ್ಕೂಟದ ಸದಸ್ಯರು ಆಗ್ರಹಿಸಿದ್ದಾರೆ.
ಕ್ಷತ್ರೀಯ ಸಮಾಜ
ರಾಜ್ಯದಲ್ಲಿ ಸುಮಾರು 1.5 ಕೋಟಿಗಿಂತಲೂ ಹೆಚ್ಚು ಕ್ಷತ್ರೀಯ ಜನಾಂಗವಿದೆ ಹಾಗೂ ಅತೀ ಹಿಂದುಳಿದ ಜನಾಂಗವಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ರಾಜಕೀಯವಾಗಿ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಏಳು ಜನ ಶಾಸಕರು ಆಯ್ಕೆಯಾಗಿದ್ದಾರೆ. ಈ ಏಳು ಜನರಲ್ಲಿ ಪ್ರಭು ಚವ್ಹಾಣ ಅವರಿಗೆ ಸಣ್ಣ ಖಾತೆ ನೀಡಿ ಸಮಾಧಾನ ಪಡಿಸಿದೆ. ಆದರೆ ಕ್ಷತ್ರೀಯ ಸಮಾಜದ ಯಾರಿಗಾದರೂ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.