ಹುಬ್ಬಳ್ಳಿ:ಹು-ಧಾ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿದ್ದ ಪಿ.ಕೃಷ್ಣಕಾಂತ್ ಅವರನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಇದೀಗ ಅವರನ್ನು ಮೊದಲಿದ್ದ ಡಿಸಿಪಿ ಹುದ್ದೆಯಲ್ಲೂ ಮುಂದುವರೆಸಿ ಸರ್ಕಾರ ಆದೇಶ ಹೊರಡಿಸಿದೆ.
ಪೊಲೀಸ್ ಇಲಾಖೆಯಲ್ಲಿ ಅಚ್ಚರಿಯ ಆದೇಶ: ಎಸ್‌ಪಿ-ಡಿಸಿಪಿ ಆಗಿ ಕೃಷ್ಣಕಾಂತ್ ನೇಮಕ - ಧಾರವಾಡ ಎಸ್ ಪಿ
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಕೃಷ್ಣಕಾಂತ್ ಅವರನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಇದೀಗ ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿಯೂ ಮುಂದುವರಿಯುವಂತೆ ಸರ್ಕಾರ ಆದೇಶಿಸಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಕೃಷ್ಣಕಾಂತ್, ಹು-ಧಾ ಪೊಲೀಸ್ ಕಮೀಷನರ್ ಆರ್.ದಿಲೀಪ್ ಕಾರ್ಯವೈಖರಿ ಖಂಡಿಸಿ ಡಿಜಿಯವರಿಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದ್ದರು. ಹೀಗಾಗಿ ಆಯುಕ್ತರಾಗಿದ್ದ ಆರ್.ದಿಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ್ ಒಬ್ಬರ ವಿರುದ್ಧ ಮತ್ತೊಬ್ಬರು ಆರೋಪ ಹಾಗೂ ಪ್ರತ್ಯಾರೋಪ ಮಾಡಿ ಪತ್ರ ಸಮರ ಸಾರಿದ ಬೆನ್ನಲ್ಲೇ ದಿಲೀಪ್ ಹಾಗೂ ಕೃಷ್ಣಕಾಂತ್‌ರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಡಿಸಿಪಿ ಕೃಷ್ಣಕಾಂತ್‌ರನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿಯೂ ಮುಂದುವರೆಸಿ ಅಚ್ಚರಿಯ ಆದೇಶ ಹೊರಡಿಸಿದೆ.
ಡಿಸಿಪಿ ಕೃಷ್ಣಕಾಂತ್ ಇಲಾಖೆಯಲ್ಲಿ ಹಾಗೂ ಹಿರಿಯ ಅಧಿಕಾರಿಗಳಲ್ಲಿ ಒಳ್ಳೆಯ ಹೆಸರು ಹೊಂದಿದ್ದಾರೆ. ಹೀಗಾಗಿ ಅವರಿಗೆ ಇದೀಗ ಎರಡು ಸ್ಥಾನದಲ್ಲಿ ಮುಂದುವರೆಸಲು ಸರ್ಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ.