ಕರ್ನಾಟಕ

karnataka

ETV Bharat / state

ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದವರು, ಇದಕ್ಕಿಂತ ದೊಡ್ಡ ತ್ಯಾಗ ಇದೆಯಾ: ಸಲೀಂ ಅಹ್ಮದ್ ಪ್ರಶ್ನೆ - Salim Ahmad rebels against Shashi Tharoor

ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದವರು. ಇದಕ್ಕಿಂತ ದೊಡ್ಡ ತ್ಯಾಗ ಇದೆಯಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರಶ್ನಿಸಿದ್ದಾರೆ. ಸೋನಿಯಾ ಗಾಂಧಿಯವರು ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ್ದರು. ಅವರ ಪರಿವಾರ ಅಧಿಕಾರಕ್ಕೆ ಆಸೆಪಟ್ಟಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.

kpcc-president-saleem-ahmad-statement-on-sonia-gandhi
ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದವರು, ಇದಕ್ಕಿಂತ ದೊಡ್ಡ ತ್ಯಾಗ ಇದೆಯಾ ? : ಸಲೀಂ ಅಹ್ಮದ್

By

Published : Mar 12, 2022, 10:58 PM IST

ಧಾರವಾಡ: ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದವರು, ಇದಕ್ಕಿಂತ ದೊಡ್ಡ ತ್ಯಾಗ ಇದೆಯಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರಶ್ನಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷರು, ರಾಹುಲ್ ಗಾಂಧಿ ನಮ್ಮ ಯುವ ನಾಯಕರು. ಅವರ ನಾಯಕತ್ವದಲ್ಲೇ ಹೋಗುತ್ತೇವೆ. ಸೋನಿಯಾರವರು ಮನಮೋಹನ ಸಿಂಗ್‌ರನ್ನು ಪ್ರಧಾನಿ ಮಾಡಿದ್ದರು. ಆಗ ರಾಹುಲ್ ಗಾಂಧಿಯವರು ಉಪ ಪ್ರಧಾನಿ‌ ಆಗಬಹುದಿತ್ತು. ಆದರೂ ಆಗಲಿಲ್ಲ. ಆ ಪರಿವಾರ ಅಧಿಕಾರಕ್ಕೆ ಆಸೆ ಪಟ್ಟಿಲ್ಲ. ಹೀಗಾಗಿ ಈ ಪರಿವಾರದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಯಾರಿಗೆ ಎಷ್ಟೆಷ್ಟು ಯೋಗ್ಯತೆ ಇದೆಯೋ ಅಷ್ಟು ಮಾತನಾಡಿದರೆ ಒಳ್ಳೆಯದು ಎಂದು ಶಶಿ ತರೂರ್​ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಲೀಂ ಅಹ್ಮದ್

ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚಿತ್ತೆಂಬ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಇಬ್ರಾಹಿಂ 2007-08ರಲ್ಲಿ ಪಕ್ಷ ಸೇರಿದ್ದರು. 2013ರಲ್ಲಿ ಭದ್ರಾವತಿ ಹಾಲಿ ಎಂಎಲ್‌ಎ ತೆಗೆದು ಇಬ್ರಾಹಿಂ ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಫಲಿತಾಂಶ ಏನಾಯ್ತು, ಎಲ್ಲರಿಗೂ ಗೊತ್ತು. ಅದಾದ ಬಳಿಕ ಅನೇಕ ಹುದ್ದೆಗಳನ್ನು ಅವರಿಗೆ ನೀಡಲಾಗಿದೆ. ಎರಡು ಬಾರಿ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. 2019ರಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಕೇಳಿದರು. ಎಸ್.ಆರ್. ಪಾಟೀಲರನ್ನು ತೆಗೆದು ತಮ್ಮನ್ನು ನಾಯಕರನ್ನಾಗಿ ಮಾಡುವಂತೆ ಹೇಳಿದರು ಅದು ಸಾಧ್ಯವಿಲ್ಲ ಅಂತಾ ಪಕ್ಷ ಹೇಳಿತು.‌ ಪಾಟೀಲ್ ಪಕ್ಷದ ಹಿರಿಯ ಮುಖಂಡರು ಅವರನ್ನು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಅವತ್ತಿನಿಂದ ಎರಡು ವರ್ಷ ಪಕ್ಷದ ಯಾವುದೇ ಪ್ರಚಾರಕ್ಕೆ ಅವರು ಬರಲೇ ಇಲ್ಲ ಎಂದು ಟೀಕಿಸಿದರು. ಆದರೂ ಅವರು ಪಕ್ಷ ಬಿಡೋದಿಲ್ಲ ಅನ್ನೋ ವಿಶ್ವಾಸವಿದೆ. ಅವರಿಗೆ ಏನು ಕೊಡಬೇಕೋ ಅದನ್ನೆಲ್ಲ ಕೊಡಲಾಗಿದೆ. ಜೆಡಿಎಸ್- ಬಿಜೆಪಿ ಮಧ್ಯೆ ಮ್ಯಾಚ್ ಪಿಕ್ಸಿಂಗ್ ಆಗಿದೆ. ಅಂತಹ ಜೆಡಿಎಸ್ ಪಕ್ಷಕ್ಕೆ ಶಕ್ತಿ ಕೊಡಲು ಇಬ್ರಾಹಿಂ ಹೋಗಲಾರರು ಎಂದರು.

ಸಭಾಪತಿ ಹೊರಟ್ಟಿ ಮೇಲೆ ಕೇಸ್ ದಾಖಲು ಮತ್ತು ಕೇಸ್ ಹಿನ್ನೆಲೆ ಇನ್ಸ್ಪೆಕ್ಟರ್ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೊರಟ್ಟಿ ನಮ್ಮ ಪಕ್ಷದವರಲ್ಲ. ಆದರೆ ಅವರು ನಮ್ಮ ಸಭಾಪತಿ. ಹೀಗಾಗಿ ನಾವು ಧ್ವನಿ ಎತ್ತಿದ್ದೇವೆ.‌ ಈಗ ಇನ್ಸಪೆಕ್ಟರ್ ಅಮಾನತು ಮಾಡಿದ್ದಾರೆ. ನಾವು ಎಸ್ಪಿ ಅಮಾನತು ಮಾಡುವಂತೆ ಕೇಳಿದ್ದೇವೆ ಎಂದು‌ ಹೇಳಿದರು.

ಓದಿ :ಎನ್​ಸಿಸಿ ಕೆಡೆಟ್​ಗಳನ್ನು ಅಭಿನಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ

For All Latest Updates

ABOUT THE AUTHOR

...view details