ಧಾರವಾಡ:ಸಂಸದ ಪ್ರತಾಪ್ ಸಿಂಹ ಡಿಸಿ ವಿರುದ್ದ ವಾರ್ ನಡೆಸಿದ್ದಾರೆ. ಅವರಿಗೆ ಶಕ್ತಿ ಇದ್ರೆ ಡಿಸಿ ಬದಲಾವಣೆ ಮಾಡಿಕೊಳ್ಳಲಿ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ಕಿತ್ತಾಟ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಸಚಿವರು ಸೇರಿ ಸಿಎಂ ಹತ್ತಿರ ಮಾತನಾಡಿ ಬದಲಾವಣೆ ಮಾಡಿಕೊಳ್ಳಲಿ. ಇದನ್ನೆಲ್ಲ ನೋಡಿ ಜನ ಉಗೀತಾ ಇದ್ದಾರೆ.
ಡಿಸಿ ಕೆಲಸ ಪ್ರತಾಪ್ ಸಿಂಹ ಮಾಡಲು ಆಗಲ್ಲ. ಪ್ರತಾಪ್ ಸಿಂಹ ಕೆಲಸ ಡಿಸಿ ಮಾಡಲು ಆಗಲ್ಲ. ಏನೇ ಅನುಷ್ಠಾನ ಇದ್ದರೆ ಡಿಸಿ ಅವರೇ ಮಾಡಬೇಕು ಎಂದರು.
ಸರಿಯೋ ತಪ್ಪೋ ಗೊತ್ತಿಲ್ಲ. ಆದ್ರೆ, ಇವರಿಗೆ ಸಮಸ್ಯೆ ಆದ್ರೆ ಬದಲಿಸಿಕೊಳ್ಳಲಿ. ಐದೈದು ನಿಮಿಷಕ್ಕೆ ಮಂತ್ರಿ ಅಧಿಕಾರಿಗಳನ್ನು ಬದಲಿಸುತ್ತೀರಿ ಅಲ್ವಾ? ನಿಮಗೆ ಆಗದಿದ್ರೆ ಬದಲಿಸಿಕೊಳ್ಳಿ. ನಿಮಗೆ ಬೇಕಾದವರನ್ನು ತಲೆ ಮೇಲೆ ಕೂರಿಸಿಕೊಂಡು ಕೆಲಸ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಬದಲಾವಣೆಯಾದ್ರೂ ಮಾಡಲಿ, ಸಿಎಂ ಜೊತೆಗಾದರೂ ಇರಲಿ. ಅದು ಅವರ ಪಕ್ಷದ ವಿಚಾರ. ವಿರೋಧ ಪಕ್ಷದವರನ್ನು ಕರೆದುಕೊಂಡು ಸರ್ಕಾರ ಮಾಡುತ್ತಾರೆ, ಏನು ಮಾಡೋಕಾಗುತ್ತೆ ಎಂದರು.