ಹುಬ್ಬಳ್ಳಿ: ಬಿಜೆಪಿ ಆಪರೇಷನ್ ಕಮಲ ಮಾಡಿರುವುದು ಸತ್ಯ. ಅನರ್ಹ ಶಾಸಕರೆಲ್ಲರೂ ಬಿಕರಿಯಾಗಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಆರೋಪಿಸಿದರು.
ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಬಿ.ಸಿ. ಪಾಟೀಲ್ಗೆ ನೈತಿಕತೆ ಇಲ್ಲ: ದಿನೇಶ್ ಗುಂಡೂರಾವ್ ಆರೋಪ - kpcc president dinesh gundurao
ಬಿಜೆಪಿ ಆಪರೇಷನ್ ಕಮಲ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ಸತ್ಯವಾಗಿದೆ. ಆಪರೇಷನ್ ಕಮಲ ಎನ್ನುವುದೇ ಒಂದು ವ್ಯವಹಾರ ಎಂದು ಹುಬ್ಬಳ್ಳಿಯಲ್ಲಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದರು.
ನಗರದಲ್ಲಿಂದು ಮಾತನಾಡಿದ ಅವರು, ಅಪರೇಷನ್ ಕಮಲ ಎಂದ್ರೆ ಅದು ವ್ಯವಹಾರ. ಅಪರೇಷನ್ ಕಮಲ ಮಾಡಿದ್ದನ್ನು ಸಿಎಂ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದರ ಬಗ್ಗೆ ಸಂಶಯ ಯಾರಿಗೂ ಇಲ್ಲ. ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ಐಟಿ ಇಲಾಖೆಗೆ ಒತ್ತಾಯಿಸಿದ್ದೇವೆ. ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಹೇಳಿದರೂ ಇದುವರೆಗೂ ತನಿಖೆಯಾಗಿಲ್ಲ ಎಂದರು.
17 ಜನ ಶಾಸಕರಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿದವರೆಂದರೆ ಬಿ ಸಿ ಪಾಟೀಲ್. ಈಗ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಹಾಗೂ ಅರ್ಹತೆ ಇಲ್ಲ ಎಂದು ಎಂದು ಅವರು ಕಿಡಿಕಾರಿದರು.