ಹುಬ್ಬಳ್ಳಿ:ತಾಲೂಕು ಪಂಚಾಯತ್ ಸದಸ್ಯೆಯೊಬ್ಬರ ಮಗನಿಗೆ ಅಪರಿಚಿತ ವ್ಯಕ್ತಿಗಳು ಚಾಕು ಇರಿದು ಪರಾರಿಯಾಗಿರುವ ಘಟನೆ ಹಳೇ ಹುಬ್ಬಳ್ಳಿಯ ದೇವರಗುಡಿಹಾಳ ಕ್ರಾಸ್ ದುರ್ಗಾ ಬಾರ್ ಬಳಿ ನಡೆದಿದೆ.
ಹುಬ್ಬಳ್ಳಿಯಲ್ಲಿ ತಾಪಂ ಸದಸ್ಯೆ ಮಗನಿಗೆ ಚಾಕು ಇರಿತ: ದೂರು ದಾಖಲು - Hubli crime latest news
ಹಳೇ ಹುಬ್ಬಳ್ಳಿಯ ದೇವರಗುಡಿಹಾಳ ಕ್ರಾಸ್ ಬಳಿ ತಾಲೂಕು ಪಂಚಾಯತ್ ಸದಸ್ಯೆ ಮಗನಿಗೆ ದುಷ್ಕರ್ಮಿಗಳು ಚಾಕು ಇರಿದಿರುವ ಘಟನೆ ನಡೆದಿದೆ.
Hubli
ಲಕ್ಷ್ಮೀ ಯಲ್ಲಪ್ಪ ಶಿವಳ್ಳಿಯವರ ಪುತ್ರ ಮಹೇಶ ಶಿವಳ್ಳಿ ಎಂಬುವವರು ಆಟೋದಲ್ಲಿ ಕುಳಿತಿದ್ದರು. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕು ಇರಿದು ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹೇಶನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.