ಕರ್ನಾಟಕ

karnataka

ETV Bharat / state

ಗಣೇಶ ನಿಮಜ್ಜನ ವೇಳೆ ಹುಬ್ಬಳ್ಳಿಯಲ್ಲಿ ಗಲಾಟೆ... ಚಾಕು ಇರಿತದಿಂದ ಆರು ಮಂದಿಗೆ ಗಾಯ - hubli news

ಗಣೇಶ ನಿಮಜ್ಜನ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದ್ದು, ಚಾಕು ಇರಿತದಿಂದ ಆರು ಜನ ಗಾಯಗೊಂಡಿದ್ದಾರೆ.

ಗಣೇಶ ನಿಮಜ್ಜನ ವೇಳೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ...ಆರು ಜನರಿಗೆ ಗಾಯ

By

Published : Sep 13, 2019, 11:27 AM IST

ಹುಬ್ಬಳ್ಳಿ:ನಗರದಲ್ಲಿ ಗಣೇಶ ನಿಮಜ್ಜನ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಈ ವೇಳೆ ಚಾಕು ಇರಿತದಿಂದ ಆರು ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಗಣೇಶ ನಿಮಜ್ಜನ ವೇಳೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ... ಆರು ಜನರಿಗೆ ಗಾಯ

ನಗರದ ದುರ್ಗದ ಬೈಲ್​ನಲ್ಲಿ ಇಬ್ಬರಿಗೆ, ಹರ್ಷ ಕಾಂಪ್ಲೆಕ್ಸ್​ನಲ್ಲಿ ಓರ್ವ, ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಓರ್ವ ಹಾಗೂ ಹಳೇ ಹುಬ್ಬಳ್ಳಿಯಲ್ಲಿ ಇಬ್ಬರು ಸೇರಿದಂತೆ ಒಟ್ಟು ಆರು ಜನರಿಗೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿಯಲಾಗಿದೆ. ಘಟನೆಯಲ್ಲಿ ಬಸವರಾಜ ವೀರೇಶ್​ ಶಿವುರ, ಮಹಾಂತೇಶ ಬಸವನಗೌಡ ಹೊಸಮನಿ (17), ವಿನಾಯಕ ಭಜಂತ್ರಿ (21), ಮಂಜುನಾಥ ರಾಜು ಗೋಕಾಕ್​ (25), ನಾಗರಾಜ ಕುಂಬಾರ (33), ಪ್ರಕಾಶ್​ ಕಠಾರೆ (32) ಎಂಬುವರಿಗೆ ಗಾಯಗಳಾಗಿವೆ.

ಬಸವರಾಜ ಹಾಗೂ ಮಹಾಂತೇಶ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಚಾಕು ಇರಿಯಲಾಗಿದೆ ಎನ್ನಲಾಗಿದ್ದು, ಈ ಕುರಿತು ಉಪನಗರ ಹಾಗೂ ಶಹರ್​ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details