ಹುಬ್ಬಳ್ಳಿ: ನನ್ನ ಬಗ್ಗೆ ಸ್ವಾಮೀಜಿ ಬಹಳ ಆರೋಪ ಮಾಡಿದ್ದಾರೆ. ನನ್ನ ಜೀವಕ್ಕೆ ಏನಾದ್ರು ಆದ್ರೆ ದಿಂಗಾಲೇಶ್ವರ ಸ್ವಾಮೀಜಿಗಳೇ ಕಾರಣರಾಗುತ್ತಾರೆ ಎಂದು ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ನಾನು ದಿಂಗಾಲೇಶ್ವರ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವಿನಿಟ್ಟುಕೊಂಡಿದ್ದೇನೆ. ಆದ್ರೆ ಸ್ವಾಮೀಜಿ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನನಗೆ ಏನಾದ್ರು ಆದರೆ ಸ್ವಾಮೀಜಿ ಅವರೇ ಹೊಣೆಯಾಗುತ್ತಾರೆ ಎಂದರು.