ಹುಬ್ಬಳ್ಳಿ :ಕೊರೊನಾ ವೈರಸ್ ಸಾರ್ವಜನಿಕರನ್ನು ಮಾತ್ರವಲ್ಲದೇ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೂ ಬೆನ್ನು ಬಿಡದೇ ಕಾಡುತ್ತಿದೆ.
ಹೀಗಾಗಿ, ಕಿಮ್ಸ್ ಸಿಬ್ಬಂದಿಯಲ್ಲಿಯೂ ಕೊರೊನಾ ಭಯ ಆವರಿಸಿದೆ. ಕೊರೊನಾ ರೋಗಿಗಳ ಸೇವೆ ಸಲ್ಲಿಸುವ ಕೈಗಳು ಈಗ ಸಂಕಷ್ಟದಲ್ಲಿ ಸಿಲುಕಿವೆ.
ತಮಗೆ ಸೋಂಕು ತಗುಲಿದರೂ ಧೃತಿಗೆಡದ ಹುಬ್ಬಳ್ಳಿಯ ಕಿಮ್ಸ್ ಸಿಬ್ಬಂದಿ ಕೊರೊನಾ ವೈರಸ್ ವಿರುದ್ಧ ಶತಾಯುಗತಾಯ ಹೋರಾಟ ನಡೆಸುತ್ತಿರುವ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಸಿಬ್ಬಂದಿಗೂ ಕೂಡ ಕೊರೊನಾ ಬೆನ್ನು ಬಿಡದೇ ಕಾಡುತ್ತಿದೆ.
ಇದರಿಂದ ಸಿಬ್ಬಂದಿಯಲ್ಲಿಯೂ ಆತಂಕ ಮನೆ ಮಾಡಿದೆ. ಈಗಾಗಲೇ 35 ಜನ ಸ್ಟಾಫ್ ನರ್ಸ್, 25 ಜನ ಗ್ರೂಫ್ ಡಿ ನೌಕರರು ಸೇರಿದಂತೆ 25 ಜನ ಕಿಮ್ಸ್ ವೈದ್ಯರಿಗೆ ಕೊರೊನಾ ವೈರಸ್ ತಗುಲಿದೆ.
ಕರ್ತವ್ಯದ ಜೊತೆಗೆ ಕಿಲ್ಲರ್ ಕೊರೊನಾ ವಿರುದ್ಧ ಕಿಮ್ಸ್ ಸಿಬ್ಬಂದಿ ಹೋರಾಟ ನಡೆಸುವಂತಾಗಿದೆ. ಎರಡನೇ ಅಲೆಯಲ್ಲಿ ಸುಮಾರು 100 ಜನ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಆತಂಕ ಸೃಷ್ಟಿಸಿದೆ.
ದಿನದ ಬಹುತೇಕ ಸಮಯ ಪಿಪಿಇ ಕಿಟ್ ಹಾಕಿಕೊಂಡು ಕೋವಿಡ್ ವಾರ್ಡ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಭಯ ಮನೆ ಮಾಡಿದೆ.