ಹುಬ್ಬಳ್ಳಿ:ಕೊರೊನಾ ಆತಂಕದ ನಡುವೆಯೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಯರು ಮತ್ತೊಂದು ಯಶಸ್ಸಿನ ಹೆಜ್ಜೆಯಿಟ್ಟಿದ್ದಾರೆ. ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರೆಪಿ ಮಾಡಿದ ಕೀರ್ತಿ ಪಡೆದಿದ್ದ ಕಿಮ್ಸ್, ಒಂದೇ ವಾರದಲ್ಲಿ ಮತ್ತೆ ಮೂವರಿಗೆ ಯಶಸ್ವಿ ಪ್ಲಾಸ್ಮಾ ಥೆರಪಿ ಮಾಡಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
ಪ್ಲಾಸ್ಮಾ ಥೆರಪಿ ಶಸ್ತ್ರಚಿಕಿತ್ಸೆಯಲ್ಲಿ ಕಿಮ್ಸ್ ಮತ್ತೊಂದು ಮೈಲಿಗಲ್ಲು: ವಾರದಲ್ಲಿ ಮೂವರಿಗೆ ಪ್ಲಾಸ್ಮಾ ಥೆರಪಿ - Hubli Kim's Hospital
ಮೇ ಮೊದಲ ತಿಂಗಳಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಮಾಡಿ ಯಶಸ್ವಿಯಾಗಿದ್ದ ಕಿಮ್ಸ್ ವೈದ್ಯರು ಇದೀಗ ಮತ್ತೆ ಹುಬ್ಬಳ್ಳಿಯ ಇಬ್ಬರು ಹಾಗೂ ಹೊಸಪೇಟೆಯ ಓರ್ವ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡುವ ಮೂಲಕ ವೈದ್ಯಕೀಯ ಲೋಕದಲ್ಲಿ ಸಾಧನೆ ಮಾಡಿದ್ದಾರೆ.
ಮೇ ಮೊದಲ ತಿಂಗಳಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಮಾಡಿ ಯಶಸ್ವಿಯಾಗಿದ್ದ ಕಿಮ್ಸ್ ವೈದ್ಯರು ಇದೀಗ ಮತ್ತೆ ಹುಬ್ಬಳ್ಳಿಯ ಇಬ್ಬರು ಹಾಗೂ ಹೊಸಪೇಟೆಯ ಓರ್ವ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡುವ ಮೂಲಕ ವೈದ್ಯಕೀಯ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಸೋಂಕಿತ ಪ್ರತಿಯೊಬ್ಬರಿಗೂ ತಲಾ 200 ಎಂ.ಎಲ್ ಪ್ಲಾಸ್ಮಾ ಕೊಡಲಾಗಿದೆ. ಈ ಕಾರ್ಯವೂ ಜೂ.27 ರಿಂದ ಪ್ರಾರಂಭವಾಗಿ ಜು.07ಕ್ಕೆ ಮುಗದಿದೆ. ಪ್ಲಾಸ್ಮಾ ಥೆರಪಿಗೆ ಒಳಗಾದವರು ಚೇತರಿಸಿಕೊಳ್ಳುತಿದ್ದು, ಇವರ ವರದಿ ನೆಗೆಟಿವ್ ಬರುವ ವಿಶ್ವಾಸವನ್ನು ವೈದ್ಯರು ಹೊಂದಿದ್ದಾರೆ.
ಮೆಡಿಸನ್ ವಿಭಾಗದ ಡಾ.ರಾಮ ಕೌಲಗುಡ್ಡ, ಡಾ.ಸಚಿನ್ ಹೊಸಕಟ್ಟಿ, ಪ್ಯಾಥಾಲಜಿ ವಿಭಾಗದ ಡಾ.ಪುರುಷೋತ್ತಮ ರೆಡ್ಡಿ, ಡಾ.ಕವಿತಾ ಏವೂರ ತಂಡ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆಸಿದ್ದಾರೆ.