ಹುಬ್ಬಳ್ಳಿ:ಕಿಲ್ಲರ್ ಕೊರೊನಾ ವಿರುದ್ಧ ತನ್ನದೇ ಆದ ವಿಶಿಷ್ಠ ಸೇವೆಯನ್ನು ಸಲ್ಲಿಸಿರುವ ಕಿಮ್ಸ್ ಇದೀಗ ಮತ್ತೊಂದು ಉತ್ಕೃಷ್ಟ ಮಟ್ಟದ ಸೇವೆ ನೀಡಲು ಚಿಂತನೆ ನಡೆಸಿದೆ. ಇದು ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.
ಉತ್ತರ ಕರ್ನಾಟಕದ ಭಾಗದ ಬಡ ಹಾಗೂ ಮಧ್ಯಮವರ್ಗದ ಜನರು ಯಾವುದೇ ಖಾಯಿಲೆ ಬಂದರೂ ಕಿಮ್ಸ್ ಆಸ್ಪತ್ರೆಗೆ ಆಗಮಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಸಣ್ಣ ರೋಗದಿಂದ ಹಿಡಿದು ದೊಡ್ಡ ಕಾಯಿಲೆವರೆಗೂ ಈ ಆಸ್ಪತ್ರೆ ಚಿಕಿತ್ಸೆ ನೀಡಲು ಮುಂದಾಗಿದ್ದು,ಈಗ ಕಿಮ್ಸ್ ಮತ್ತೊಂದು ಉತ್ಕೃಷ್ಟ ಸೇವೆಯಾದ ಅಂಗಾಂಗ ಕಸಿ (ಆರ್ಗನ್ ಟ್ರಾನ್ಸ್ ಪ್ಲಾಂಟೇಷನ್)ಗೆ ಮುಂದಾಗಿದೆ.
ಆರ್ಗನ್ ಟ್ರಾನ್ಸ್ ಪ್ಲಾಂಟೇಷನ್ ಚಿಕಿತ್ಸೆ್ಗೆ ಕಿಮ್ಸ್ ಚಿಂತನೆ ಕಿಮ್ಸ್ ಈಗಾಗಲೇ ಆರ್ಗನ್ ಟ್ರಾನ್ಸ್ ಪ್ಲಾಂಟೇಷನ್ ಸೇವೆ ಪ್ರಾರಂಭಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಈಗಾಗಲೇ ನೆಪ್ರಾಲಜಿ ವಿಭಾಗದ ತಂಡದ ನೇತೃತ್ವದಲ್ಲಿ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ಸರ್ಕಾರದ ಅನುಮತಿಗೆ ಕಾಯುತ್ತಿದೆ. ಸುಮಾರು ರೋಗಿಗಳಿಗೆ ಅಂಗಾಂಗ ಕಸಿ ಅವಶ್ಯಕವಾಗಿರುವುದರಿಂದ ಕೂಡಲೇ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಚಿಕಿತ್ಸೆಗೆ ಅನುಕೂಲ ಮಾಡಿಕೊಡಬೇಕಿದೆ.
ಅಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ನಿರಾಸೆಯಾಗಬಾರದು ಎಂಬ ಸದುದ್ದೇಶದಿಂದ ಕಿಮ್ಸ್ ಇಂತಹದೊಂದು ಮಹತ್ವಪೂರ್ಣ ನಿರ್ಧಾರಕ್ಕೆ ಚಿಂತನೆ ನಡೆಸಿದ್ದು,ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಇನ್ನೇನಿದ್ದರೂ ಸರ್ಕಾರ ಅಸ್ತು ಎಂದು ಉತ್ತರ ಕರ್ನಾಟಕದ ಸಂಜೀವಿನಿ ಸೇವೆಗೆ ಮತ್ತೊಂದು ಶಕ್ತಿಯನ್ನು ನೀಡಬೇಕಿದೆ.
ಕೊರೊನಾ ಹಾವಳಿಯಿಂದ ಯೋಜನೆ ಕಾರ್ಯರೂಪಕ್ಕೆ ಬರುವಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದು, ವೈರಸ್ ಭೀತಿಯಿಂದ ಕೊಂಚ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ. ಚಿಕಿತ್ಸೆ ನೀಡಲು ನಾವು ಸನ್ನದ್ಧರಾಗಿದ್ದೇವೆ ಎನ್ನುತ್ತಾರೆ ಇಲ್ಲಿನ ವೈದ್ಯರು.