ಧಾರವಾಡ: ಎಸ್‌ಡಿಎಂ ಆಸ್ಪತ್ರೆಗೆ ಕಸಿ ಮಾಡುವ ಸಂಬಂಧ ಆ್ಯಂಬುಲೆನ್ಸ್ ಮೂಲಕ ಕಿಡ್ನಿ ಯಶಸ್ವಿಯಾಗಿ ತರಲಾಗಿದೆ. ಬೆಳಗಾವಿ ಕೆಎಲ್ಇ ಆಸ್ಪತ್ರೆಯಿಂದ ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ಒಂದು ಗಂಟೆಯಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ.
ಒಂದೇ ಗಂಟೆಯಲ್ಲಿ ಬೆಳಗಾವಿಯಿಂದ SDMಗೆ ಕಿಡ್ನಿ ರವಾನೆ ಬೆಳಗಾವಿಯಿಂದ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್‌ವರೆಗೆ ಬಂದ ಆ್ಯಂಬುಲೆನ್ಸ್ಗೆ ಪೊಲೀಸರು ಎಸ್ಕಾರ್ಟ್ ನೀಡಿದ್ದರು. ಅಲ್ಲಿಂದ ಎಸ್‌ಡಿಎಂ ಆಸ್ಪತ್ರೆವರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಆ್ಯಂಬುಲೆನ್ಸ್ ಎಸ್.ಡಿ.ಎಂ ಆಸ್ಪತ್ರೆ ತಲುಪಿತು.
ಒಂದೇ ಗಂಟೆಯಲ್ಲಿ ಬೆಳಗಾವಿಯಿಂದ SDMಗೆ ಕಿಡ್ನಿ ರವಾನೆ ಧಾರವಾಡದ ಜುಬ್ಲಿ ಸರ್ಕಲ್ ನಿಂದ ಆ್ಯಂಬುಲೆನ್ಸ್ಗೆ ಬಿಆರ್‌ಟಿಎಸ್ ರಸ್ತೆ ಮೂಲಕ ಸಾಗಿಸಲು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಬೆಳಗಾವಿಯಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಕಿಡ್ನಿ ತಂದು ಯಶಸ್ವಿಯಾಗಿ ಕಸಿ ಮಾಡಲಾಗಿದೆ.
ಒಂದೇ ಗಂಟೆಯಲ್ಲಿ ಬೆಳಗಾವಿಯಿಂದ SDMಗೆ ಕಿಡ್ನಿ ರವಾನೆ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರ ಕಿಡ್ನಿಯನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ತಂದು ಕಿಡ್ನಿ ಕಸಿ ಮಾಡಲಾಗಿದೆ. ಜೀರೋ ಟ್ರಾಫಿಕ್ ಹಾಗೂ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ ಪೊಲೀಸರಿಗೆ ಹಾಗೂ ಸಹಕರಿಸಿದ ಸಿಬ್ಬಂದಿ SDM ಉಪ ಕುಲಪತಿ ಡಾ. ನಿರಂಜನ ಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ.