ಧಾರವಾಡ: ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಮಾಡಲಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಶ್ರೀನಿವಾಸ ನಾಯ್ಡು ಅಪಹರಣಕ್ಕೊಳಗಾದ ಉದ್ಯಮಿಯಾಗಿದ್ದು, ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಬಳಿ ಪತ್ತೆಯಾಗಿದ್ದಾರೆ. ಪೊಲೀಸರು ಬೆನ್ನತ್ತಿದ್ದ ಹಿನ್ನೆಲೆಯಲ್ಲಿ ಅಪಹರಣಕಾರರು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ: ಬೆನ್ನಟ್ಟಿದ ಪೊಲೀಸರಿಗೆ ಹೆದರಿ ಬಿಟ್ಟು ಹೋದರು - ಧಾರವಾಡ ವಿದ್ಯಾಗಿರಿ ಠಾಣೆ
ಅಳಿಯನೊಂದಿಗೆ ಜಮೀನು ನೋಡಲು ಹೋದಾಗ ಉದ್ಯಮಿಯನ್ನು ಅಪಹರಣಕಾರರು ಇಬ್ಬರನ್ನೂ ಅಪಹರಿಸಿದ್ದು, ಪೊಲೀಸರು ಬೆನ್ನಟ್ಟಿ ಬರುವುದನ್ನು ಗಮನಿಸಿ ಬಿಟ್ಟು ಪರಾರಿಯಾಗಿದ್ದಾರೆ.
ಅಳಿಯನೊಂದಿಗೆ ಜಮೀನು ನೋಡಲು ಹೋದಾಗ ಅಪಹರಣ ನಡೆದಿದ್ದು, ಅಳಿಯನ ಮೇಲೆ ಹಲ್ಲೆ ಮಾಡಿ ದುಷ್ಕರ್ಮಿಗಳು ಅಪಹರಿಸಿದ್ದರು. ಹೀಗೆ ಅಪಹರಿಸಿ ಜಮೀನೊಂದರ ಶೆಡ್‌ನಲ್ಲಿ ಕೂಡಿ ಹಾಕಿದ್ದರು. ಘಟನೆ ನಡೆದ ತಕ್ಷಣವೇ ಅಳಿಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ಬಂದ ತಕ್ಷಣವೇ ಪೊಲೀಸರು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಅಪಹರಣಕಾರರು ಅವರನ್ನು ಬಿಟ್ಟು ಹೋಗಿದ್ದಾರೆ.
ಪೊಲೀಸರು ದೇವರ ಹುಬ್ಬಳ್ಳಿಯಿಂದ ಧಾರವಾಡ ವಿದ್ಯಾಗಿರಿ ಠಾಣೆಗೆ ಉದ್ಯಮಿ ಶ್ರೀನಿವಾಸ ನಾಯ್ಡುರನ್ನು ಕರೆತಂದಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆಗೆ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.