ಹುಬ್ಬಳ್ಳಿ: ಪ್ರೀತಿಯ ನಾಟಕವಾಡಿ ಬಾಲಕಿಯನ್ನು ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರ ನಡೆಸಿರುವ ಕಾರವಾರದ ಶ್ರೀನಿಧಿ ಅಲಿಯಾಸ್ ಓಂಕಾರ ಕೊಟ್ಟೇಕರ ಎಂಬಾತನ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
17 ವರ್ಷದ ಅಪ್ರಾಪ್ತೆಯ ಜೊತೆ ಶ್ರೀನಿಧಿ ಪ್ರೀತಿಯ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದ. ಪುಸಲಾಯಿಸಿ ಆಕೆ ಜತೆಗೆ ತಬ್ಬಿಕೊಂಡಿರುವ ಫೋಟೋ ತೆಗೆದುಕೊಂಡಿದ್ದ. ಈ ಫೋಟೋ ತೋರಿಸಿ ಆಕೆಗೆ ಬೆದರಿಸಿ 2021ರ ನವೆಂಬರ್‌ನಿಂದ 2022ರ ಫೆಬ್ರವರಿ ನಡುವೆ ನಗರದ ಲಾಡ್ಜ್ವೊಂದಕ್ಕೆ ಕರೆದೊಯ್ದು ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಪ್ರಕರಣದಲ್ಲಿ ಉಲ್ಲೇಖವಾಗಿದೆ.