ಕರ್ನಾಟಕ

karnataka

ETV Bharat / state

ಕರ್ನಾಟಕ ವಿವಿ - ಹ್ಯಾರಿಸ್ ಬರ್ಗ್ ವಿವಿ ನಡುವೆ ಜಂಟಿ ಶೈಕ್ಷಣಿಕ ಚಟುವಟಿಕೆಗಳ ಒಪ್ಪಂದಕ್ಕೆ ಸಹಿ - ಕರ್ನಾಟಕ ವಿವಿ ಒಪ್ಪಂದಕ್ಕೆ ಸಹಿ

ಶೈಕ್ಷಣಿಕ, ಸಂಶೋಧನೆ, ಶಿಕ್ಷಕರ ವಿನಿಮಯ ಸೇರಿದಂತೆ ಜಂಟಿಯಾಗಿ ಶೈಕ್ಷಣಿಕ ಚಟುವಟಿಕೆಗಳ ಒಪ್ಪಂದಕ್ಕೆ ಕರ್ನಾಟಕ ವಿವಿ ಮತ್ತು ಹ್ಯಾರಿಸ್ ಬರ್ಗ್​ ವಿವಿ ಸಹಿ ಹಾಕಿದೆ.

Karnataka University MOU
ಜಂಟಿ ಶೈಕ್ಷಣಿಕ ಚಟುವಟಿಕೆಗಳ ಒಪ್ಪಂದಕ್ಕೆ ಸಹಿ

By

Published : May 8, 2021, 2:38 PM IST

ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಜಂಟಿಯಾಗಿ ಅಮೆರಿಕದ ಹ್ಯಾರಿಸ್ ಬರ್ಗ್​ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಜೊತೆಗೆ ಶೈಕ್ಷಣಿಕ, ಸಂಶೋಧನೆ, ಶಿಕ್ಷಕರ ವಿನಿಮಯ ಸೇರಿದಂತೆ ಜಂಟಿಯಾಗಿ ಶೈಕ್ಷಣಿಕ ಚಟುವಟಿಕೆಗಳ ಒಪ್ಪಂದಕ್ಕೆ ವರ್ಚುಯಲ್ ಕಾರ್ಯಕ್ರಮದ ಮೂಲಕ ಸಹಿ ಹಾಕಿದೆ.

ಈ ಒಪ್ಪಂದದ ಅನ್ವಯ ಜೈವಿಕ ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು. ವಿಜ್ಞಾನ ತಂತ್ರಜ್ಞಾನ, ಸಮಾಜಿಕ ವಿಜ್ಞಾನ ಮತ್ತು ವಿವಿಧ ವಿಷಯಗಳ ಅಧ್ಯಯನಕ್ಕಾಗಿ ಶಿಕ್ಷಕರು, ವಿದ್ಯಾರ್ಥಿಗಳ ವಿನಿಮಯ ಸೇರಿದಂತೆ ಈ ಸಂಸ್ಥೆಗಳ ಜೊತೆ ಜಂಟಿಯಾಗಿ ಶೈಕ್ಷಣಿಕ ವಿಚಾರ ಸಂಕಿರಣ, ಕಾರ್ಯಾಗಾರ, ವಿಚಾರ ಗೋಷ್ಠಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತರಬೇತಿಗಳನ್ನು ಆಯೋಜಿಸುವುದು. ಶಿಕ್ಷಕರಿಗೆ ನವೀನ ಬೋಧನಾ ವಿಧಾನದ ಕುರಿತು ತರಬೇತಿಗಳನ್ನು ಆಯೋಜಿಸುವುದು. ಶೈಕ್ಷಣಿಕ ವಲಯದಲ್ಲಿ ಪರಸ್ಪರ ಸಹಕಾರ ನೀಡುವುದರ ಜೊತೆಗೆ ಇತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳವುದು ಮತ್ತು ಯೋಜನಾ ಬದ್ಧವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವುದರ ಜೊತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಂಶೋಧನೆಗೆ ಹೆಚ್ಚು ಒತ್ತು ನೀಡುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ.

ವರ್ಚುವಲ್ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು

ಓದಿ : ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಿಂದ 86 ಐಸಿಯು ಬೆಡ್ ವ್ಯವಸ್ಥೆ

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ, ಪೆನ್ಸಿಲ್​ವೇನಿಯಾ ಉನ್ನತ ಶಿಕ್ಷಣ ಇಲಾಖೆಯ ಕಾರ್ಯ ನಿರ್ವಾಹ ಕುಲಪತಿ ಡಾ. ಪೀಟರ್ ಗಾರಲ್ಯಾಂಡ್, ಹ್ಯಾರಿಸ್ ಬರ್ಗ್​ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಲಹಾ ಮಂಡಳಿಯ ಅಧ್ಯಕ್ಷ ಎರಿಕ್ ಡಾರ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ.ಗುಡಸಿ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ ನಾಯಕ್ ಮತ್ತು ಕವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ವೇದಮೂರ್ತಿ ಇದ್ದರು.

ABOUT THE AUTHOR

...view details