ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಮಾಧ್ಯಮಿಕ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಶಿಕ್ಷಕರು ಸೇರಿದಂತೆ ಒಟ್ಟು 14 ಹುದ್ದೆಗಳಿವೆ.
ಹುದ್ದೆಗಳ ವಿವರ:
- ಸಹಾಯಕ ಶಿಕ್ಷಕರು- 9
- ಸಂಗೀತ ಶಿಕ್ಷಕ- 1
- ಸಹಾಯಕ ಹೌಸ್ ಮಾಸ್ಟರ್ ಹಾಗು ಸಹಾಯಕ ಶಿಕ್ಷಕ- 1
- ಸಹಾಯಕ ಹೌಸ್ ಮಾಸ್ಟರ್- 1
- ಸಹಾಯಕ ಶಿಕ್ಷಕರು- 2
ವಿದ್ಯಾರ್ಹತೆ:
- ಸಹಾಯಕ ಶಿಕ್ಷಕರು- ಸ್ನಾತಕೋತ್ತರ ಪದವಿ, ಬಿ.ಎಡ್
- ಸಂಗೀತ ಶಿಕ್ಷಕ- ಸಂಗೀತದಲ್ಲಿ ಸ್ನಾತಕೋತ್ತರ ಪದವಿ
- ಸಹಾಯಕ ಹೌಸ್ ಮಾಸ್ಟರ್ ಕಂ ಸಹಾಯಕ ಶಿಕ್ಷಕ- ಸ್ನಾತಕೋತ್ತರ ಪದವಿ, ಬಿಎಡ್
- ಸಹಾಯಕ ಹೌಸ್ ಮಾಸ್ಟರ್ - ವಿಜ್ಞಾನದಲ್ಲಿ ಪದವಿ ಬಿಎಡ್
- ಸಹಾಯಕ ಶಿಕ್ಷಕರು- ಪಿಯುಸಿ, ಡಿಎಲ್ಎಡ್, ಡಿ.ಎಡ್
ವಯೋಮಿತಿ: ಗರಿಷ್ಠ ವಯೋಮಿತಿ 42 ವರ್ಷ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ. ಪಂ, ಪ್ರವರ್ಗ 1, ವಿಶೇಷಚೇತನ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.