ಧಾರವಾಡ:ರಾಜಕಾರಣಿಗಳ ಮಧ್ಯೆ ಕೀಳು ಮಟ್ಟದ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಟೀಕೆ ಟಿಪ್ಪಣಿ ಯಾವುದೇ ಇರಲಿ ಇಂತಹ ಶಬ್ದಗಳನ್ನು ಬಳಸಬಾರದು. ಜನ ರಾಜಕಾರಣಿಗಳನ್ನು ನೋಡುತ್ತಿರುತ್ತಾರೆ ಎಂದು ಕಿವಿಮಾತು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು ಬಹಳ ಗೌರವದಿಂದ ನಡೆದುಕೊಳ್ಳಬೇಕು. ಇನ್ನೊಬ್ಬರಿಗೆ ಮಾದರಿಯಾಗಿ ಇರಬೇಕು. ಈಗ ಬಳಸುತ್ತಿರುವ ಶಬ್ದಗಳು ಯಾರಿಗೂ ಸರಿ ಅನಿಸಿಲ್ಲ, ಅವರವರ ವೈಯಕ್ತಿಕ ವಿಚಾರಗಳಿಗೆ ಹೋಗಬಾರದು ಇದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.