ಧಾರವಾಡ: ಜಿಲ್ಲಾ ಆರೋಗ್ಯ ಅಧಿಕಾರಿ ಕುರ್ಚಿಗೆ ಗುದ್ದಾಟ ಶುರುವಾಗಿದೆ. ಬಸನಗೌಡ ಕರಿಗೌಡರ್ ಈಗ ಮತ್ತೆ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿದ್ದಾರೆ.
ಧಾರವಾಡ ಡಿಎಚ್ಓ ಆಗಿ ಮತ್ತೆ ಅಧಿಕಾರ ವಹಿಸಿಕೊಂಡ ಕರಿಗೌಡರ್ - DHO
ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ಬಸನಗೌಡ ಕರಿಗೌಡರ್ ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆ ತಾಲೂಕು ಆರೋಗ್ಯ ಅಧಿಕಾರಿಯಾಗಿ ಕರಿಗೌಡರನ್ನು ಸರ್ಕಾರ ನೇಮಿಸಿತ್ತು.
ಬಸನಗೌಡ ಕರಿಗೌಡರ್ ಮತ್ತು ಶಶಿ ಪಾಟೀಲ್
ಅ. 1 ರಂದು ಕರ್ತವ್ಯಲೋಪ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿದ್ದ ಅವರನ್ನು ತಾಲೂಕು ಆರೋಗ್ಯ ಅಧಿಕಾರಿಯಾಗಿ ಸರ್ಕಾರ ನೇಮಿಸಿತ್ತು. ಈ ಹಿನ್ನೆಲೆ ಶಶಿ ಪಾಟೀಲ್ ಅಧಿಕಾರ ವಹಿಸಿಕೊಂಡಿದ್ದರು. ಇದನ್ನು ಕರಿಗೌಡರ್ ಕೆಎಟಿಯಲ್ಲಿ ಪ್ರಶ್ನಿಸಿದ್ದರು. ನಂತರ ಕರಿಗೌಡರ್ ಪರವಾಗಿ ಕೆಎಟಿ ಆದೇಶ ಮಾಡಿತ್ತು. ಹೀಗಾಗಿ ಕರಿಗೌಡರ್ ಮತ್ತೆ ಧಾರವಾಡ ಡಿಎಚ್ಒ ಕಚೇರಿಗೆ ಬಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಇದನ್ನೂ ಓದಿ:ಹಳಿಯಾಳ ಪ್ಯಾರಿ ಸಕ್ಕರೆ ಕಾರ್ಖಾನೆ ಕುರಿತು ವರದಿ ಪಡೆದು, ಸೂಕ್ತ ಕ್ರಮ: ಸಚಿವ ಮುನೇನಕೊಪ್ಪ