ಕರ್ನಾಟಕ

karnataka

ETV Bharat / state

ಶ್ರೀಲಂಕಾದಲ್ಲಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯ: ಹುಬ್ಬಳ್ಳಿಯ 18 ಸ್ಪರ್ಧಿಗಳು ಆಯ್ಕೆ​​

ಜನವರಿ 19ರಿಂದ ಶ್ರೀಲಂಕಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯ ನಡೆಯಲಿದ್ದು ಹುಬ್ಬಳ್ಳಿಯಿಂದ 18 ಕರಾಟೆ ಪಟುಗಳು ಭಾಗವಹಿಸಲಿದ್ದಾರೆ.

18 ಕರಾಟೆ ಪಟುಗಳು ಆಯ್ಕೆ​​
18 ಕರಾಟೆ ಪಟುಗಳು ಆಯ್ಕೆ​​

By ETV Bharat Karnataka Team

Published : Jan 18, 2024, 8:17 AM IST

Updated : Jan 18, 2024, 3:31 PM IST

ಅಂತಾರಾಷ್ಟ್ರೀಯ ಕರಾಟೆ ಪಂದ್ಯಕ್ಕೆ ಹುಬ್ಬಳ್ಳಿಯ 18 ಸ್ಪರ್ಧಿಗಳು ಆಯ್ಕೆ​​

ಹುಬ್ಬಳ್ಳಿ:ಇಲ್ಲಿನ ಆಸ್ಪೈರ್​​ ಸ್ಪೋರ್ಟ್ಸ್​ ಅಕಾಡೆಮಿಯಲ್ಲಿ ಕರಾಟೆ ಕಲಿತ ಸ್ಪರ್ಧಿಗಳು ಜನವರಿ 19ರಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟು 18 ಸ್ಪರ್ಧಿಗಳು ಹುಬ್ಬಳ್ಳಿ-ಧಾರವಾಡದಿಂದ ಆಯ್ಕೆಯಾಗಿದ್ದಾರೆ. ಈ ಸ್ಪರ್ಧಿಗಳು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ.

ಶ್ರೀಲಂಕಾ, ಬಾಂಗ್ಲಾ, ಜಪಾನ್​ ಸೇರಿದಂತೆ ಆರು ದೇಶದ ಕರಾಟೆಪಟುಗಳು ಕೂಟದಲ್ಲಿ ಸೆಣಸಾಡಲಿದ್ದಾರೆ. ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. 9ರಿಂದ 47 ವಯೋಮಿತಿಯ ಕ್ರೀಡಾಳುಗಳು ಪಾಲ್ಗೊಳ್ಳುತ್ತಿದ್ದಾರೆ.

ಕರಾಟೆ ಕ್ರೀಡಾಪಟು ಮಗಧೀರ್​ ಮಾತನಾಡಿ, "ನಾವು ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕರಾಟೆ ಟೂರ್ನಮೆಂಟ್​ನಲ್ಲಿ ಭಾಗವಹಿಸಲಿದ್ದೇವೆ. ಅಲ್ಲಿ ಭಾಗವಹಿಸಿ ನಮ್ಮ ದೇಶ ಹೆಮ್ಮೆ ಪಡುವಂತೆ ಮಾಡುತ್ತೇವೆ. ಇದಕ್ಕಾಗಿ ಉತ್ತಮ ಅಭ್ಯಾಸ ನಡೆಸಿದ್ದೇವೆ" ಎಂದು ಹೇಳಿದರು.

ತರಬೇತುದಾರ ಪುಲಕೇಶ ಮಲ್ಯಾಳ ಪ್ರತಿಕ್ರಿಯಿಸಿ, "ನಮ್ಮಲ್ಲಿರುವ ಮಕ್ಕಳು ಜಿಲ್ಲಾವಾರು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಫರ್ಧಿಸಲು ಅರ್ಹರಾಗಿದ್ದಾರೆ. ಕಳೆದೊಂದು ವರ್ಷದಿಂದ ಹೆಚ್ಚಿನ ತರಬೇತಿ ನೀಡುತ್ತಿದ್ದು, ಪ್ರತಿದಿನ 6 ಗಂಟೆಗಳ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಫಲಿತಾಂಶದ ನಿರೀಕ್ಷೆ ಇದೆ" ಎಂದರು.

ಇದನ್ನೂ ಓದಿ:ಒಲಿಂಪಿಕ್ಸ್​ ಕ್ವಾಲಿಫೈಯರ್ಸ್ ಸೆಮಿ - ಫೈನಲ್​ನಲ್ಲಿ ಜರ್ಮನಿ ವಿರುದ್ಧ ಸೆಣಸಲಿರುವ ಭಾರತ

Last Updated : Jan 18, 2024, 3:31 PM IST

ABOUT THE AUTHOR

...view details