ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯ ಕರಾಡಿ ಓಣಿಯ ಸುತ್ತಲೂ ಸೀಲ್​ಡೌನ್ : ಕಮರಿಪೇಟೆ ಠಾಣೆ ಸ್ಥಳಾಂತರ - Kamaripete police station shift temporarily in Hubli

ಕರಾಡಿ ಓಣಿ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಸಂಪೂರ್ಣ ಸೀಲ್​ಡೌನ್ ಮಾಡಿರುವ ಕಾರಣ ಕಮರಿಪೇಟೆ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ.

Kamaripete police station shift temporarily in Hubli
ಕಮರಿಪೇಟೆ ಠಾಣೆ ಸ್ಥಳಾಂತರ

By

Published : Apr 20, 2020, 4:47 PM IST

ಹುಬ್ಬಳ್ಳಿ: ನಗರದ ಕಮರಿಪೇಟೆಯ ತೊರವಿ ಹಕ್ಕಲ ಬಳಿಯ ಕರಾಡಿ ಓಣಿಯಲ್ಲಿನ ನಿವಾಸಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಸ್ಥಳದಿಂದ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಜಿಲ್ಲಾಡಳಿತ ಸಂಪೂರ್ಣ ಸೀಲ್​ಡೌನ್ ಮಾಡಿದೆ. ಪರಿಣಾಮ ಇಲ್ಲಿರುವ ಕಮರಿಪೇಟೆ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ.

ಮುಲ್ಲಾ ಓಣಿಯ ಕೊರೊನಾ ಸೋಂಕಿತನೊಂದಿಗೆ, ಕರಾಡಿ ಓಣಿಯ ವ್ಯಕ್ತಿ ದ್ವಿತೀಯ ಸಂಪರ್ಕ ಹೊಂದಿದ್ದ ಕಾರಣ ಸೋಂಕು ತಗುಲಿದೆ. ಮುಂಜಾಗ್ರತಾ ಕ್ರಮವಾಗಿ ಕರಾಡಿ ಓಣಿಯ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. ಈ ಸ್ಥಳದಲ್ಲಿ ಕಮರಿಪೇಟೆ ಪೊಲೀಸ್ ಠಾಣೆಯೂ ಬರುವ ಕಾರಣ ಠಾಣೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿದ್ದಾರೆ.

ಕಾರವಾರ ರಸ್ತೆಯ ಬಾಸೆಲ್ ಮಿಷನ್ ಮೇರಿ ಮೊಮೊರಿಯಲ್ ಚರ್ಚ್ ಬಳಿಯ ಹೆಬಿಕ್ ಪ್ರಾರ್ಥನಾ ಮಂದಿರಕ್ಕೆ ಠಾಣೆಯನ್ನು ಸ್ಥಳಾಂತರ ಮಾಡಲಾಗಿದೆ.

ABOUT THE AUTHOR

...view details