ಕರ್ನಾಟಕ

karnataka

ETV Bharat / state

ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣ: ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಿದ ಪೊಲೀಸ್​ - writer Kalburgi murder

ವಿಚಾರವಾದಿ ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣ- ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಿದ ಪೊಲೀಸರು- ಬಿಗಿ ಬಂದೋಬಸ್ತ್​

Kalburgi murder case: Police produced the accused in court
ಕಲ್ಬುರ್ಗಿ ಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ ಪೊಲೀಸರು

By

Published : Jul 19, 2022, 12:39 PM IST

Updated : Jul 19, 2022, 12:50 PM IST

ಧಾರವಾಡ: ಹಿರಿಯ ವಿಚಾರವಾದಿ, ಸಾಹಿತಿ ಎಂ.ಎಂ ಕಲ್ಬುರ್ಗಿ ಅವರ ಹತ್ಯೆ ಪ್ರಕರಣದ ಆರೋಪಿಗಳನ್ನು ಇಂದು ಪೊಲೀಸರು ಧಾರವಾಡ ಜಿಲ್ಲಾ ನಾಲ್ಕನೇ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಪೊಲೀಸ್ ಬಿಗಿ ಬಂದೋಬಸ್ತ್​​ನಲ್ಲಿ ಆರೋಪಿಗಳಾದ ಪ್ರವೀಣ್ ಚತುರ, ಶರದ್ ಕಳಸದಕರ್, ಅಮುಲ್ ಕಾಳೆ ಸೇರಿ ಇನ್ನೂ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಎಸಿಪಿ ನೇತೃತ್ವದಲ್ಲಿ ಆರೋಪಿಗಳನ್ನು ಪೊಲೀಸರು ಕೋರ್ಟ್​ಗೆ ಕರೆತಂದರು.

ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಿದ ಪೊಲೀಸ್​

ಆಗಸ್ಟ್ 30, 2015ರಂದು ಕಲ್ಬುರ್ಗಿ ಅವರ ಕಲ್ಯಾಣ ನಗರದ ನಿವಾಸಲ್ಲಿ ಆರೋಪಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ:ಕೋಲಾರದಲ್ಲಿ ಮೂವರು ನಕಲಿ ಎಸಿಬಿ ಅಧಿಕಾರಿಗಳು ಅರೆಸ್ಟ್.. ಠಾಣೆಗೆ ಕರೆದೊಯ್ಯುವಾಗ ಹೈಡ್ರಾಮಾ ​

Last Updated : Jul 19, 2022, 12:50 PM IST

ABOUT THE AUTHOR

...view details