ಹುಬ್ಬಳ್ಳಿ :ಉತ್ತರ ಕರ್ನಾಟಕ ಭಾಗದ ಬಹು ದಿನಗಳ ಕನಸಾಗಿರುವ ಕಳಸಾ-ಬಂಡೂರಿ ಹೋರಾಟ ಮತ್ತೆ ಜೀವ ಪಡೆದಿದೆ. ಕಾಮಗಾರಿ ಪುನಾರಂಭಕ್ಕೆ ಕಳಸಾ-ಬಂಡೂರಿ ಹೋರಾಟ ಸಮಿತಿ ಆಗ್ರಹಿಸಿದೆ.
ಮಲಪ್ರಭೆಗೆ ಮಹದಾಯಿ ನೀರು ಹರಿಸುವ ಕಳಸಾ-ಬಂಡೂರಿ ತಿರುವು ಯೋಜನೆಯ ಕಾಮಗಾರಿ ಪುನಾರಂಭಿಸಲು ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನ್ಯಾಯಾಧಿಕರಣವು ತೀರ್ಪು ನೀಡಿ 13.5 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿದೆ. ಅದರಂತೆ ಈ ಹಿಂದಿನ ಸರ್ಕಾರಗಳು ಕಾಮಗಾರಿಗೆ ಹಣ ಕಾಯ್ದಿರಿಸಲಾಗಿದೆ ಎಂದು ಹೇಳಿವೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದು ಅಗತ್ಯ ತಾಂತ್ರಿಕ ಸಮಸ್ಯೆ ಸರಿಪಡಿಸಬೇಕು. ಕೂಡಲೇ ಕಾಮಗಾರಿ ಪ್ರಾರಂಭಿಸಲು ಮುಂದಾಗಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ.